ಕರ್ನಾಟಕ

karnataka

ETV Bharat / state

ಚೆಕ್​​ ಪೋಸ್ಟ್ ತಪಾಸಣೆ: ಶಿವಮೊಗ್ಗದಲ್ಲಿ 1.40 ಕೋಟಿ ಹಣ, ಲಕ್ಷಾಂತರ ರೂ. ಮೌಲ್ಯದ ಅಕ್ಕಿ ವಶ - ಚೆಕ್​​ ಪೋಸ್ಟ್ ತಪಾಸಣೆ

ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಚೆಕ್​​ ಪೋಸ್ಟ್​​ನಲ್ಲಿ ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ 1.40 ಕೋಟಿ ರೂ., 26 ಕ್ವಿಂಟಾಲ್​ ಅಕ್ಕಿ ಹಾಗೂ ಅಕ್ರಮ ಮದ್ಯ ಪತ್ತೆಯಾಗಿದೆ.

shivamogga
ಚೆಕ್​​ ಪೋಸ್ಟ್ ತಪಾಸಣೆ

By

Published : Apr 1, 2023, 2:33 PM IST

Updated : Apr 1, 2023, 2:53 PM IST

ಶಿವಮೊಗ್ಗ:ಚುನಾವಣೆ ಘೋಷಣೆ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಇಲ್ಲಿನ ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹರಕೆರೆ ಬಳಿಯ ಚೆಕ್​​ ಪೋಸ್ಟ್​​ನಲ್ಲಿ ತಪಾಸಣೆ ನಡೆಸಿದಾಗ ದಾಖಲೆಯಿಲ್ಲದ 1.40 ಕೋಟಿ ರೂ.ಪತ್ತೆಯಾಗಿದೆ. ಎಟಿಎಂಗೆ ಹಣ ಹಾಕುವ ಮಹೇಂದ್ರ ಬೋಲೆರೋ ವಾಹನದಲ್ಲಿ ಹಣ ಪತ್ತೆಯಾಗಿದೆ. ಹಣವನ್ನು ವಶಕ್ಕೆ ಪಡೆದು ಚುನಾವಣಾ ಅಧಿಕಾರಿಗಳಿಗೆ ‌ನೀಡಲಾಗಿದೆ.

ಅದರಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚೆಕ್ ಪೊಸ್ಟ್​​ನಲ್ಲಿ ಕಾರನ್ನು ತಪಾಸಣೆ ನಡೆಸಿದಾಗ ದಾಖಲೆ ಇಲ್ಲದ 20 ಲಕ್ಷ ರೂ. ಹಣ ಪತ್ತೆಯಾಗಿದೆ. ಈ ಹಣವನ್ನು ಚುನಾವಣಾಧಿಕಾರಿಗಳ ಸುಪರ್ದದಿಗೆ ನೀಡಲಾಗಿದೆ.

26 ಕ್ವಿಂಟಾಲ್​​ ಅಕ್ಕಿ ವಶ: ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲೆ ಇಲ್ಲದೆ ಲಾರಿಯಲ್ಲಿ ಸಾಗಿಸುತ್ತಿದ್ದ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಲಾರಿಯಲ್ಲಿ ಅಕ್ಕಿ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಈ ವೇಳೆ ಲಾರಿಯಲ್ಲಿ 26 ಕ್ಚಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ.

4.50 ಕೋಟಿ ರೂ. ಮೌಲ್ಯದ ಸೀರೆ ವಶ: ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಗೋದಾಮಿನಲ್ಲಿ ದಾಖಲೆ ಇಲ್ಲದ 4.50 ಕೋಟಿ ರೂ ಮೌಲ್ಯದ ಸೀರೆ ವಶಕ್ಕೆ ಪಡೆಯಲಾಗಿದೆ. ಶಿವಮೊಗ್ಗದ ಶೇಷಾದ್ರಿಪುರಂ ಸರ್ಕಾರಿ ಶಾಲೆಯ ಪಕ್ಕದ ಗೋದಾಮಿನಲ್ಲಿ ಸೀರೆ ಸಂಗ್ರಹ ಮಾಡಲಾಗಿದೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ದಾಖಲೆ ರಹಿತವಾದ ವಸ್ತುಗಳನ್ನು ಪೊಲೀಸರು ಜಿಎಸ್​​ಟಿ ವಿಭಾಗದ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ.

ಅಕ್ರಮ ಮದ್ಯ ವಶ: ಚುನಾವಣೆ ಹಿನ್ನೆಲೆ ಗಸ್ತಿನಲ್ಲಿದ್ದ ಅಬಕಾರಿ ಪೊಲೀಸರು 3,21,939 ರೂ. ಮೌಲ್ಯದ ಅಕ್ರಮ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗ ತಾಲೂಕು ದೇವಬಾಳ ಗ್ರಾಮದ ಬಳಿ ಚಲಿಸುತ್ತಿದ್ದ ಕಾರನ್ನು ತಪಾಸಣೆ ನಡೆಸಿದಾಗ ಅಕ್ರಮ ಮದ್ಯ ಪತ್ತೆಯಾಗಿದೆ. ಕಾರಿನಲ್ಲಿ ಗಿರೀಶ್ ನಾಯ್ಕ್ ಎಂಬಾತನಿದ್ದು, ಆತನನ್ನು ಅಬಕಾರಿ ಪೊಲೀಸರು ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ:ವಿಜಯಪುರ : ದೇವಣಗಾಂವ್ ಚೆಕ್​ಪೋಸ್ಟ್ ಬಳಿ ದಾಖಲೆ ಇಲ್ಲದ 9 ಲಕ್ಷ ಹಣದ ಜೊತೆ ಸೀರೆ, ಬಟ್ಟೆ ಜಪ್ತಿ

15 ಲಕ್ಷ ಹಣ, ಕಾರು ಜಪ್ತಿ..ಮಾ.26ರಂದುದಾಖಲೆ ಇಲ್ಲದೆ ಸಾಗಿಸುತ್ತಿದ್ದ 15 ಲಕ್ಷ ಹಣವನ್ನು ಹುಬ್ಬಳ್ಳಿಯ ಕಾರವಾರ ರಸ್ತೆಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಜಪ್ತಿ ಮಾಡಿದ್ದಾರೆ. ಅಂಕೋಲಾದಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಕಾರನ್ನು ತಪಾಸಣೆ ನಡೆಸಿದಾಗ 15 ಲಕ್ಷ ಹಣ ಪತ್ತೆಯಾಗಿದೆ. ಕೂಡಲೇ ಚೆಕ್ ಪೋಸ್ಟ್ ಸಿಬ್ಬಂದಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್​ ಕಲಗೌಡ ಪಾಟೀಲ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಕಾರು ಮತ್ತು ಚಾಲಕನನ್ನು ವಶಕ್ಕೆ ಪಡೆದು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಹುಬ್ಬಳ್ಳಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 15 ಲಕ್ಷ ಹಣ, ಕಾರು ಜಪ್ತಿ..

Last Updated : Apr 1, 2023, 2:53 PM IST

ABOUT THE AUTHOR

...view details