ಕರ್ನಾಟಕ

karnataka

ETV Bharat / state

ಕನ್ನಡ ಕಲಿಸಿ, ಉಳಿಸಿ, ಬೆಳೆಸುವ ಬ್ಯಾಂಕಿಂಗ್ ಉದ್ಯೋಗಿಗಳ‌ 'ಕನ್ನಡ ಕೂಟ'

ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಕನ್ನಡ ಬಳಕೆ ತೀರಾ ಕಡಿಮೆಯಿರುವುದನ್ನು ಮನಗಂಡಿರುವ ಶಿವಮೊಗ್ಗ ಜಿಲ್ಲೆಯ ಕೆನರಾ ಬ್ಯಾಂಕ್ ಉದ್ಯೋಗಿಗಳು ತಮ್ಮದೇ ಒಂದು‌ ಕನ್ನಡ ಸಂಘ 'ಕನ್ನಡ ಕೂಟ'ವನ್ನು ರಚಿಸಿಕೊಂಡಿದ್ದಾರೆ. ಈ ಮೂಲಕ ಮಾತೃಭಾಷೆಯ ಉಳಿವಿಗಾಗಿ ಶ್ರಮಿಸುತ್ತಿದ್ದಾರೆ.

By

Published : Nov 1, 2020, 7:33 AM IST

Shivamogga Canara Bank Employees Kannada Service
ಕನ್ನಡ ಕಲಿಸಿ, ಉಳಿಸಿ, ಬೆಳೆಸುವ ಬ್ಯಾಂಕಿಂಗ್ ಉದ್ಯೋಗಿಗಳ‌ 'ಕನ್ನಡ ಕೂಟ'

ಶಿವಮೊಗ್ಗ:ಕನ್ನಡವನ್ನು ಬಳಸಬೇಕು, ಬೆಳೆಸಬೇಕು ಹಾಗೂ ಕಲಿಸಬೇಕು ಎಂಬ ದೃಷ್ಟಿಯಿಂದ ಶಿವಮೊಗ್ಗದ ಕೆನರಾ ಬ್ಯಾಂಕ್ ಉದ್ಯೋಗಿಗಳು ತಮ್ಮದೇ ಒಂದು‌ ಕನ್ನಡ ಸಂಘ 'ಕನ್ನಡ ಕೂಟ' ವನ್ನು ರಚನೆ ಮಾಡಿ ಕನ್ನಡ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಕೆನರಾ ಬ್ಯಾಂಕ್ ಉದ್ಯೋಗಿಗಳ 'ಕನ್ನಡ ಕೂಟ' ಸಂಘ

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಾದ ಕನ್ನಡಿಗರು:

ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಕನ್ನಡ ಬಳಕೆ ತೀರಾ ಕಡಿಮೆ. ಹೆಚ್ಚಿನ ಬ್ಯಾಂಕ್​ ಉದ್ಯೋಗಿಗಳು ಹೊರ ರಾಜ್ಯದವರಾಗಿತ್ತಾರಾದ್ದರಿಂದ ಕನ್ನಡಕ್ಕಿಂತ ಹಿಂದಿ, ಇಂಗ್ಲಿಷ್​ ಬಳಕೆಯೇ ಹೆಚ್ಚಿರುತ್ತದೆ. ಇದರಿಂದ ಬ್ಯಾಂಕ್​ ಸೇವೆ ಪಡೆಯಲು ಬರುವ ಅದೆಷ್ಟೋ ಅನಕ್ಷರಸ್ಥರಿಗೆ, ಸ್ಥಳೀಯ ಭಾಷೆ ಹೊರತುಪಡಿಸಿ ಬೇರೆ ಭಾಷೆ ಬಾರದವರಿಗೆ ಸಮಸ್ಯೆಗಳೂ ಆಗಿವೆ. ಈ ಸಮಸ್ಯೆ ನಿವಾರಣೆಯಲ್ಲಿ ಕನ್ನಡ ಕೂಟ ಕಾರ್ಯ ನಿರ್ವಹಿಸುತ್ತಿದೆ. ಇತರೆ ಪ್ರದೇಶಗಳಿಂದ ಬ್ಯಾಂಕ್​ನಲ್ಲಿ ಉದ್ಯೋಗಕ್ಕಾಗಿ ಬರುವವರಿಗೆ ಕನ್ನಡ ಕಲಿಯುವಲ್ಲಿ ನೆರವಾಗಿ ಸ್ಥಳೀಯರಿಗೆ ಸಹಾಯವಾಗುವಂತೆ ಮಾಡುತ್ತಿದೆ.

ಕನ್ನಡದ ಅಸ್ತಿತ್ವದ ಉಳಿವಿಗಾಗಿ ತಮ್ಮ ಕೈಲಾದ ಕೊಡುಗೆ ಕೊಡುವ ಉದ್ದೇಶದೊಂದಿಗೆ ಸಂಘಟಕರು ಈ ಕೂಟವನ್ನು ಪ್ರಾರಂಭಿಸಿದರು. ಜಿಲ್ಲೆಯ ಸುಮಾರು 300 ಜನ ಸೇರಿ ಪ್ರಾರಂಭಿಸಿದ ಕನ್ನಡ ಕೂಟ ಸಂಘದಲ್ಲಿ ಇದೀಗ 1600 ಕ್ಕೂ ಅಧಿಕ ಮಂದಿ ಇದ್ದು, ಇನ್ನೂ ವಿಸ್ತಾರವಾಗಿ ಹರಡಿಕೊಳ್ಳುತ್ತಿದೆ.

ಅಷ್ಟೇಅಲ್ಲ, ರಾಜ್ಯದ ಬ್ಯಾಂಕ್​ಗಳಲ್ಲಿ ಸ್ಥಳೀಯರಿಗೆ ಉದ್ಯೋಗವಕಾಶ ಸಿಗಬೇಕು ಎಂಬ ಉದ್ದೇಶದಿಂದ ಸಂಘಟಿಕರು ಜಿಲ್ಲೆಯಲ್ಲಿ ಕಾರ್ಯಾಗಾರಗಳನ್ನು ಆಯೋಜಿಸಿ ಯುವಕ, ಯವತಿಯರನ್ನು ಬ್ಯಾಂಕ್​ ಪರೀಕ್ಷೆ ಬರೆಯುವಂತೆ ಉತ್ತೇಜಿಸುತ್ತಾರೆ. ಹಾಗೂ ಪರೀಕ್ಷೆ ಬಗೆಗಿನ ಸಂಪೂರ್ಣ ಮಾಹಿತಿ ನೀಡಿ ಉದ್ಯೋಗಾಕಾಂಕ್ಷಿಗಳಿಗೆ ಕೈಲಾದ ಸಹಾಯ ಕೆಲಸ ಮಾಡುತ್ತಾರೆ.

ABOUT THE AUTHOR

...view details