ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ದುರ್ಗಮ್ಮ ಮತ್ತು ಮರಿಯಮ್ಮ ದೇವಿಯರ ರಥೋತ್ಸವ..

ದೇವಿಯರಿಗೆ ಬಲಿ ನೀಡದೆ ಸಿಹಿ ಅಡುಗೆ ಮಾಡುವುದು ಇನ್ನೂಂದು ವಿಶೇಷ.‌ ಜಾತ್ರೆ ರಾತ್ರಿ‌11 ಗಂಟೆ ತನಕ ನಡೆಯುತ್ತದೆ. ನಂತರ ರಥವನ್ನು ವಾಪಸ್ ದೇವಾಲಯದ ಬಳಿ ತರಲಾಗುತ್ತದೆ.

By

Published : Mar 9, 2020, 10:38 PM IST

ದೇವಿಯರ ರಥೋತ್ಸವ
ದೇವಿಯರ ರಥೋತ್ಸವ

ಶಿವಮೊಗ್ಗ: ಪ್ರತಿ ವರ್ಷ ಹೋಳಿ ಹುಣ್ಣಿಮೆ ದಿನ ನಡೆಯುವ ನಗರದ ದುರ್ಗಿಗುಡಿಯ ದುರ್ಗಮ್ಮ ಮತ್ತು ಮರಿಯಮ್ಮ ದೇವಿಯರ ರಥೋತ್ಸವ ಇಂದು ಅದ್ದೂರಿಯಾಗಿ ನಡೆಯಿತು.

ಹೋಳಿ ಹುಣ್ಣಿಮೆಗೂ ಮೂರು ದಿನದ ಮೊದಲು ರಥೋತ್ಸವದ ತಯಾರಿ ನಡೆಯುತ್ತದೆ. ಮೊದಲ ದಿನದ ಗಂಗೆ ಪೊಜೆಯ ನಂತರ ಜಾತ್ರೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಪ್ರತಿ ದಿನ ನಗರದ ವಿವಿಧ ದೇವಾಲಯಗಳಿಗೆ ತೆರಳಿ ವಿಶೇಷ ಪೊಜೆ ಸ್ವೀಕರಿಸಲಾಗುತ್ತದೆ.

ದುರ್ಗಮ್ಮ ಮತ್ತು ಮರಿಯಮ್ಮ ದೇವಿಯರ ರಥೋತ್ಸವ..

ಹೋಳಿ ಹುಣ್ಣಿಮೆಯ ಹಿಂದಿನ ದಿನ ನಗರದ ಕೋಟೆ ಆಂಜನೇಯ ದೇವಾಲಯಕ್ಕೆ ಭೇಟಿ ಕೊಟ್ಟು, ದೇವಿ ಅಲ್ಲಿಂದ ಉಡಿ ಅಕ್ಕಿಯನ್ನು ಸ್ವೀಕಾರ ಮಾಡಿಕೊಂಡು ರಾತ್ರಿ ರಥೋತ್ಸವದ ಕಳಸವನ್ನು ಏರಿಸಲಾಗುತ್ತದೆ. ಬಳಿಕ ಪ್ರತಿ ಮನೆಯಲ್ಲೂ ಸಹ ಆರತಿ ಸ್ವೀಕಾರ ಮಾಡಿ ನಂತರ ರಥವನ್ನು ಏರುತ್ತಾಳೆ. ದೇವಿಯರು ರಥ ಏರುವ ಮುನ್ನಾ ಭಕ್ತರು ಮೆಣಸಿನಕಾಳು ಹಾಗೂ ಮಂಡಕ್ಕಿಯನ್ನು ಎರಚುತ್ತಾರೆ. ಈ ಮೂಲಕ ತಮ್ಮ ಹರಕೆಯನ್ನು ತೀರಿಸುತ್ತಾರೆ.

ದೇವಿಯರಿಗೆ ಬಲಿ ನೀಡದೆ ಸಿಹಿ ಅಡುಗೆ ಮಾಡುವುದು ಇನ್ನೂಂದು ವಿಶೇಷ.‌ ಜಾತ್ರೆ ರಾತ್ರಿ‌11 ಗಂಟೆ ತನಕ ನಡೆಯುತ್ತದೆ. ನಂತರ ರಥವನ್ನು ವಾಪಸ್ ದೇವಾಲಯದ ಬಳಿ ತರಲಾಗುತ್ತದೆ. ಹೋಳಿ ಹುಣ್ಣಿಮೆ ದಿನ ದೇವಾಲಯದ ಓಕಳಿ‌ ಹಾಕಿದ ಮೇಲೆ ಜಾತ್ರಾ ಮಹೋತ್ಸವ ಮುಕ್ತಾಯವಾಗುತ್ತದೆ.

ABOUT THE AUTHOR

...view details