ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಡಿಎಸ್ಎಸ್ ಸಂಘಟನೆಯಿಂದ ಎಸ್ಪಿ ಕಚೇರಿ ಎದುರು ಪ್ರತಿಭಟನೆ.... - ದಲಿತ ಸಂಘರ್ಷ ಸಮಿತಿ

ಶಿವಮೊಗ್ಗದ ಜಿಲ್ಲಾ ಪೊಲೀಸ್​​ ಕಚೇರಿ ಎದುರು ದಲಿತ ಸಂಘರ್ಷ ಸಮಿತಿ ( ಅಂಬೇಡ್ಕರ್ ವಾದ) ಪ್ರತಿಭಟನೆ ನಡೆಸಿದೆ.

Protest in front of SP's office by DSS organization at shimoga
ಡಿಎಸ್ಎಸ್ ಸಂಘಟನೆಯಿಂದ ಎಸ್ಪಿ ಕಚೇರಿ ಎದುರು ಪ್ರತಿಭಟನೆ

By

Published : Jul 2, 2020, 11:35 PM IST

ಶಿವಮೊಗ್ಗ: ತಾಲೂಕು ಪುರದಾಳು ಗ್ರಾಮದ ಭೂ ವಿವಾದಕ್ಕೆ ಸಂಬಂಧಿಸಿದಂತೆ ಅನ್ಯಾಯಕ್ಕೆ ಒಳಗಾದವರ ಪರ ಹೋರಾಟ ನಡೆಸಿದ ಡಿ ಎಸ್ ಎಸ್ ನ ಮುಖಂಡ ಹಾಲೇಶಪ್ಪ ಹಾಗೂ ಪದಾಧಿಕಾರಿಗಳ ವಿರುದ್ಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು,ಇದನ್ನು ಕೈ ಬಿಡುವಂತೆ ಜಿಲ್ಲಾ ಪೊಲೀಸ್​​ ಕಚೇರಿ ಎದುರು ಪ್ರತಿಭಟಿಸಲಾಗಿದೆ.

ಡಿಎಸ್ಎಸ್ ಸಂಘಟನೆಯಿಂದ ಎಸ್ಪಿ ಕಚೇರಿ ಎದುರು ಪ್ರತಿಭಟನೆ

ದಲಿತರ ಪರವಾಗಿ ಹೋರಾಟ ನಡೆಸುವವರ ವಿರುದ್ದ ದೂರು ದಾಖಲಿಸಿ, ಹೋರಾಟಗಾರರನ್ನು ಹತ್ತಿಕ್ಕುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡುವ ಉದ್ದೇಶವನ್ನು ಹೊಂದಿರುವವರ ಪರವಾಗಿ ಪೊಲೀಸ್ ಇಲಾಖೆ ವರ್ತಿಸುತ್ತಿದೆ ಎಂದು ಆರೋಪಿಸಿ, ಈ ಕೂಡಲೇ ಡಿ ಎಸ್ ಎಸ್ ಮುಖಂಡರ ವಿರುದ್ದ ದಾಖಲಾಗಿರುವ ದೂರನ್ನು ಕೈ ಬಿಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಸ್ಥಳಕ್ಕೆ ಬಂದ ಹೆಚ್ಚುವರಿ ರಕ್ಷಣಾಧಿಕಾರಿ ಶೇಖರ್ ಪ್ರತಿಭಟನಾಕಾರರ ಮನವಿಯನ್ನು ಸ್ವೀಕರಿಸಿ ಈ ಕುರಿತು ಸೂಕ್ತ ಕ್ರಮ ತೆಗೆದು ಕೊಳ್ಳುವ ಭರವಸೆ ನೀಡಿದ ಮೇಲೆ ಪ್ರತಿಭಟನೆಯನ್ನು ವಾಪಸ್ ಪಡೆದುಕೊಳ್ಳಲಾಯಿತು.

ABOUT THE AUTHOR

...view details