ಕರ್ನಾಟಕ

karnataka

ETV Bharat / state

ಕರ್ತವ್ಯದಲ್ಲಿದ್ದಾಗ ನಿಂದನೆ ಆರೋಪ : ಹೆಡ್​​ ಕಾನ್ಸ್​ಟೇಬಲ್ ಅಮಾನತು

ಈ ಕುರಿತು ಗ್ರಾಮಸ್ಥರು ಭದ್ರಾವತಿ ಡಿವೈಎಸ್​​ಪಿ ಹಾಗೂ ಎಸ್​​ಪಿಗೆ ದೂರು ನೀಡಿದ್ದರು. ದೂರನ್ನು ಪರಿಶೀಲಿಸಿದ ಎಸ್​ಪಿ ಲಕ್ಷ್ಮಿಪ್ರಸಾದ್ ಅವರು ಆರೋಪ ಸಾಬೀತಾದ ಹಿನ್ನೆಲೆ ಗಿರಿಧರ್​​ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ..

By

Published : Oct 18, 2021, 6:24 PM IST

police-head-constable-suspended-in-abuse-case
ಕರ್ತವ್ಯದಲ್ಲಿದ್ದಾಗ ನಿಂದನೆ ಆರೋಪ: ಹೆಡ್​​ ಕಾನ್ಸ್​ಟೇಬಲ್ ಅಮಾನತು

ಶಿವಮೊಗ್ಗ :ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ ಆರೋಪದ ಮೇರೆಗೆ ಹೊಳೆಹೊನ್ನೂರು ಪೊಲೀಸ್ ಠಾಣೆಯ ಹೆಡ್​​ ಕಾನ್ಸ್​ಟೇಬಲ್‌ನನ್ನು ಎಸ್​ಪಿ ಲಕ್ಷ್ಮಿಪ್ರಸಾದ್ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯ ಗಿರಿಧರ್ ಅಮಾನತಾದ ಹೆಡ್​​ ಕಾನ್ಸ್​ಟೇಬಲ್ ಆಗಿದ್ದಾರೆ.

ಗಿರಿಧರ್ 112 ವಾಹನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಭದ್ರಾವತಿ ತಾಲೂಕು ಯಡೇಹಳ್ಳಿ ಗ್ರಾಮಕ್ಕೆ ಕರ್ತವ್ಯಕ್ಕೆ ಹೋದಾಗ ವೀರಶೈವ ಸಮಾಜದವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರು ಎಂದು ಆರೋಪಿಸಲಾಗಿತ್ತು.

ಈ ಕುರಿತು ಗ್ರಾಮಸ್ಥರು ಭದ್ರಾವತಿ ಡಿವೈಎಸ್​​ಪಿ ಹಾಗೂ ಎಸ್​​ಪಿಗೆ ದೂರು ನೀಡಿದ್ದರು. ದೂರನ್ನು ಪರಿಶೀಲಿಸಿದ ಎಸ್​ಪಿ ಲಕ್ಷ್ಮಿಪ್ರಸಾದ್ ಅವರು ಆರೋಪ ಸಾಬೀತಾದ ಹಿನ್ನೆಲೆ ಗಿರಿಧರ್​​ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ:ಇದೇ ತಿಂಗಳು 25 ರಿಂದ 1-5ನೇ ತರಗತಿ ಆರಂಭ.. ಶೇ 50 ರಷ್ಟು ಮಾತ್ರ ಹಾಜರಾತಿ

ABOUT THE AUTHOR

...view details