ಕರ್ನಾಟಕ

karnataka

ETV Bharat / state

ಎಲ್ಲ ಮುಸ್ಲಿಮರು ಕೆಟ್ಟವರಲ್ಲ, ಕೆಲ ಮತಾಂಧರಿಂದ ದುಷ್ಕೃತ್ಯ: ಸಚಿವ ಈಶ್ವರಪ್ಪ - Bangalore riots

ಬೆಂಗಳೂರಿನಲ್ಲಿ ಶಾಸಕ ಅಖಂಡ ಶ್ರೀನಿವಾಸ್​ಮೂರ್ತಿ ಮನೆಯ ಮೇಲೆ ದಾಳಿ ಹಾಗೂ ಗಲಭೆಯನ್ನು ಸಚಿವ ಕೆ.ಎಸ್. ಈಶ್ವರಪ್ಪ ಖಂಡಿಸಿದ್ದಾರೆ. ‌

DS
ಸಚಿವ ಈಶ್ವರಪ್ಪ

By

Published : Aug 12, 2020, 1:11 PM IST

ಶಿವಮೊಗ್ಗ: ನಾನು ಎಲ್ಲ ಮುಸ್ಲಿಮರು ಕೆಟ್ಟವರು ಎಂದು ಹೇಳುತ್ತಿಲ್ಲ. ಆದರೆ ಕೆಲ ಮತಾಂಧ ಮುಸ್ಲಿಂರು ಮಾತ್ರ ಇಂತಹ ದುಷ್ಕೃತ್ಯದಲ್ಲಿ ತೂಡಗಿಕೊಳ್ಳುತ್ತಾರೆ ಎಂದು ಬೆಂಗಳೂರು ಗಲಭೆಯನ್ನು ಸಚಿವ ಕೆ.ಎಸ್. ಈಶ್ವರಪ್ಪ ಖಂಡಿಸಿದ್ದಾರೆ.

ಸಚಿವ ಈಶ್ವರಪ್ಪ ಹೇಳಿಕೆ

ಈ ದುಷ್ಕೃತ್ಯ ಖಂಡನೀಯ, ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಂತಹ ಮತಾಂಧ ಮುಸ್ಲಿಮರನ್ನು ಪಕ್ಷಾತೀತವಾಗಿ ಖಂಡಿಸಬೇಕಿದೆ. ದುಷ್ಕೃತ್ಯದಲ್ಲಿ ಪೊಲೀಸರು, ಮಾಧ್ಯಮದವರ ಮೇಲೆ ಹಲ್ಲೆ ನಡೆಸಲಾಗಿದೆ. ಉಗ್ರಗಾಮಿಗಳನ್ನು‌ ಸದೆಬಡೆದ ದೇಶ ಭಾರತವಾಗಿದೆ. ಈ ಘಟನೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಯಾಕೆ ಖಂಡಿಸಿಲ್ಲ. ಡಿಕೆಶಿ ಇಂತಹವರ ವಿರುದ್ಧ ಹೇಳಿಕೆ ನೀಡಬೇಕಿತ್ತು. ಇಂತಹ ಮತಾಂಧರಿಗೆ ಡಿ.ಕೆ. ಶಿವಕುಮಾರ್​ ಬೆಂಬಲವಿದೆ ಎಂದೆನ್ನಿಸುತ್ತದೆ. ಹೀಗಾಗಿಯೇ ಈ ದುಷ್ಕೃತ್ಯ ನಡೆಸುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ‌.

ಘಟನೆಯಲ್ಲಿ ಯಾರದೇ ಕೈವಾಡ ಇರಲಿ, ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ. ಪಕ್ಷಭೇದ ಮರೆತು ಎಲ್ಲಾ ದೇಶಭಕ್ತರು ಒಂದಾಗಿ ಈ ಘಟನೆ ಖಂಡಿಸಬೇಕಿದೆ. ಮತಾಂಧರಿಗೆ ಹಿಂದಿನ ಸರ್ಕಾರಗಳ ಬೆಂಬಲದಿಂದ ಈ ರೀತಿ ಬಲಿತಿದ್ದಾರೆ. ಮುಂದೆ ಈ ರೀತಿ ಆಗಲು ಬಿಡಲ್ಲವೆಂದು ಎಂದು ಕೆ ಎಸ್​ ಈಶ್ವರಪ್ಪ ಎಚ್ಚರಿಕೆ ರವಾನಿಸಿದ್ದಾರೆ.

ABOUT THE AUTHOR

...view details