ಶಿವಮೊಗ್ಗ: ಸಂಸದ ಬಿ ವೈ ರಾಘವೇಂದ್ರ ಶಿವಮೊಗ್ಗ ಹೊರ ವಲಯದ ಸೋಗಾನೆ ವಿಮಾನ ನಿಲ್ದಾಣ ಕಾಮಗಾರಿ ವೀಕ್ಷಣೆ ನಡೆಸಿದರು. ಕಳೆದ ಒಂದು ವರ್ಷಗಳಿಂದ ವೇಗವಾಗಿ ಕಾಮಗಾರಿ ನಡೆಸಲಾಗುತ್ತಿದೆ.
ಮೊದಲು ಸಣ್ಣ ವಿಮಾನ ಹಾರಾಟದಷ್ಟು ಕಾಮಗಾರಿ ನಡೆಸಲಾಗುತ್ತಿತ್ತು. ನಂತರ ದೊಡ್ಡ ವಿಮಾನ ಇಳಿಯುವಷ್ಟು ದೊಡ್ಡದಾದ ರನ್ ವೇ ನಿರ್ಮಾಣ ಮಾಡಲಾಗುತ್ತಿದೆ.
ಇದರಿಂದ ಶಿವಮೊಗ್ಗದಿಂದ ದೇಶದ ಯಾವುದೇ ವಿಮಾನ ನಿಲ್ದಾಣಕ್ಕೆ ಹೋಗುವ ಅವಕಾಶವಿದೆ. ರನ್ ವೇ ಕಾಮಗಾರಿ ಭರದಿಂದ ನಡೆಸಲಾಗುತ್ತಿದೆ. ಮುಂದಿನ 8 ತಿಂಗಳಲ್ಲಿ ಕಾಮಗಾರಿ ಪೂರ್ಣವಾಗುತ್ತಿದೆ ಎಂದ್ರು.
ಉಳಿದಂತೆ ಕಟ್ಟಡ ಕಾಮಗಾರಿಯ ಗುತ್ತಿಗೆದಾರರಿಗೆ ಬೇಗನೆ ಕಾಮಗಾರಿ ಪ್ರಾರಂಭಿಸುವಂತೆ ಸೂಚಿಸಲಾಗಿದೆ ಎಂದರು. 2022ರ ಅಂತ್ಯದ ವೇಳೆ ಕಾಮಗಾರಿ ಪೂರ್ಣಗೊಳ್ಳಲಿದೆ. ಸಂಸದರ ಭೇಟಿ ವೇಳೆ ಮೇಯರ್ ಸುನೀತ ಅಣ್ಣಪ್ಪ, ಗುತ್ತಿಗೆದಾರರು ಹಾಜರಿದ್ದರು.