ಕರ್ನಾಟಕ

karnataka

By

Published : Aug 4, 2021, 7:06 PM IST

ETV Bharat / state

‘ಕೊನೆಯವರೆಗೂ ಕಾಂಗ್ರೆಸ್​​ನಲ್ಲೇ ಇರುವೆ’.. ಅಧಿಕೃತವಾಗಿ ಕಾಂಗ್ರೆಸ್ ಸದಸ್ಯತ್ವ ಪಡೆದ ಮಧು ಬಂಗಾರಪ್ಪ

ಜೆಡಿಎಸ್ ತೊರೆದು ಕಾಂಗ್ರೆಸ್​​ ಸೇರ್ಪಡೆಯಾಗಿದ್ದ ಮಧು ಬಂಗಾರಪ್ಪ ಅಧಿಕೃತವಾಗಿ ಸದಸ್ಯತ್ವ ಪಡೆದಿದ್ದಾರೆ. ಬಳಿಕ ಮಾತನಾಡಿ ಕೊನೆಯವರೆಗೂ ಕಾಂಗ್ರೆಸ್​​ನಲ್ಲಿಯೇ ಉಳಿದು ಪಕ್ಷ ಬಲವರ್ಧನೆಗೆ ಶ್ರಮಿಸುವುದಾಗಿ ತಿಳಿಸಿದ್ದಾರೆ. ​​

Madhu Bangarappa
ಮಧು ಬಂಗಾರಪ್ಪ

ಶಿವಮೊಗ್ಗ: ಮಾಜಿ ಸಿಎಂ ಎಸ್.ಬಂಗಾರಪ್ಪ ಅವರ ಪುತ್ರ ಮಧು ಬಂಗಾರಪ್ಪ ಜಿಲ್ಲಾ ಕಾಂಗ್ರೆಸ್​ ಸದಸ್ಯತ್ವ ಪಡೆಯುವ ಮೂಲಕ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಶಿವಮೊಗ್ಗದ ಪಾರ್ಕ್ ಬಡಾವಣೆಯ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರ ಸಮ್ಮುಖದಲ್ಲಿ ಜಿಲ್ಲಾ ಕಾಂಗ್ರೆಸ್ ಸದಸ್ಯತ್ವ ಪಡೆದು ಕಾಂಗ್ರೆಸ್​ಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.

ಮಧು ಬಂಗಾರಪ್ಪ ಅವರು ಹುಬ್ಬಳ್ಳಿಯಲ್ಲಿ ಕಾಂಗ್ರೆಸ್​​ನ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್​​​ಗೆ ಸೇರ್ಪಡೆಯಾಗಿದ್ದರು. ಆದರೆ, ಇಂದು ಜಿಲ್ಲಾ‌ ಕಾಂಗ್ರೆಸ್​​​​ನ ಸದಸ್ಯತ್ವ ಪಡೆಯುವ ಮೂಲಕ ಅಧಿಕೃತವಾಗಿ ಕಾಂಗ್ರೆಸ್ ಸದಸ್ಯರಾಗಿದ್ದಾರೆ.

ಅಧಿಕೃತ ಕಾಂಗ್ರೆಸ್ ಸದಸ್ಯತ್ವ ಪಡೆದ ಮಧು ಬಂಗಾರಪ್ಪ
ಕಾಂಗ್ರೆಸ್​​ಗೆ ಬೆಂಬಲಿಗರ ಕರೆತಂದ ಮಧು

ಮಧು ಬಂಗಾರಪ್ಪ ತಾವೊಬ್ಬರೆ ಕಾಂಗ್ರೆಸ್ ಸೇರ್ಪಡೆಯಾಗದೆ, ಸೊರಬ ಸೇರಿದಂತೆ ಜಿಲ್ಲೆಯ ಬಂಗಾರಪ್ಪ ಅಭಿಮಾನಿಗಳು, ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರನ್ನು‌ ಕಾಂಗ್ರೆಸ್​​​​​ಗೆ ಸೇರಿಸಿದ್ದಾರೆ. ನಂತರ ಮಾತನಾಡಿದ ಮಧು ಬಂಗಾರಪ್ಪ, ನಾನು ನಮ್ಮ ತಂದೆ ಬಂಗಾರಪ್ಪ ಅವರ ಜೊತೆ ಅವರು ಯಾವ ಪಕ್ಷಕ್ಕೆ ಹೋಗುತ್ತಾರೂ ಅವರ ಜೊತೆ ಇರುತ್ತಿದ್ದೆ. ಈಗ ನಾನು ಸ್ವಯಂ ಅಗಿ ಕಾಂಗ್ರೆಸ್​​​ಗೆ ಬಂದಿದ್ದೇನೆ ಎಂದರು.

ಒಮ್ಮೆ ಸಾರ್ವತ್ರಿಕ ಚುನಾವಣೆ ಹಾಗೂ ಉಪ ಚುನಾವಣೆಯಲ್ಲಿ ನನಗೆ ಕಾಂಗ್ರೆಸ್ ಜೊತೆ ಎಂಗೇಜ್​ಮೆಂಟ್​ ಆಗಿತ್ತು. ಈಗ ಅಧಿಕೃತವಾಗಿ ಮದುವೆಯಾದಂತೆ ಆಗಿದೆ ಎಂದಿದ್ದಾರೆ. ನಾನು ಜೆಡಿಎಸ್​​​​ನಲ್ಲೂ ಪ್ರಮಾಣಿಕವಾಗಿ ಕೆಲಸ ಮಾಡಿದ್ದೆನೆ. ನಮ್ಮ ತಂದೆ ಅಭಿಮಾನಿಗಳು ಎಲ್ಲಾ ಪಕ್ಷದಲ್ಲೂ ಇದ್ದಾರೆ. ನಾನು ಕೊನೆ ತನಕ ಕಾಂಗ್ರೆಸ್​​​​​ನಲ್ಲಿಯೇ ಇರುತ್ತೇನೆ. ನನ್ನಲ್ಲಿ ಪಕ್ಷ ಕಟ್ಟಲು ಛಲವಿದೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.

ಬಳಿಕ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಮಧು ಬಂಗಾರಪ್ಪ ಕಾಂಗ್ರೆಸ್ ಗೆ ಬಂದಿರುವುದು ನಮ್ಮ‌ಮನೆ ಮಗ ಮರಳಿ ಮನೆಗೆ ಬಂದಂತಾಗಿದೆ ಎಂದಿದ್ದಾರೆ. ಇದು ನಮಗೆ ಆಸ್ತಿ ಬಂದ ಹಾಗೆ ಶಕ್ತಿ ಬಂದಂತೆ ಆಗಿದೆ. ಇವರಿಂದ ಪಕ್ಷ ಸಂಘಟನೆ ದೊಡ್ಡ ಮಟ್ಟದಲಿ ಆಗಬೇಕಿದೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಜವಾಬ್ದಾರಿ ಇದೆ. ಇವರು ಪಕ್ಷಕ್ಕೆ ಆಸ್ತಿಯಾಗಿ ಕೆಲಸ ಮಾಡಬೇಕಿದೆ ಎಂದರು. ಮುಂಬರುವ ತಾ.ಪಂ ಹಾಗೂ ಜಿ.ಪಂ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರಬೇಕಿದೆ.

ಓದಿ:ಮೂರೇ ತಿಂಗಳಲ್ಲಿ ನಿವೃತ್ತಿಯಾಗಲಿದ್ದ ಕಲಬುರಗಿ ಯೋಧ ಹುತಾತ್ಮ.. ಮುಗಿಲು ಮುಟ್ಟಿತು ಕುಟುಂಬಸ್ಥರ ಆಕ್ರಂದನ

ABOUT THE AUTHOR

...view details