ಶಿವಮೊಗ್ಗ: ಕಾಂಗ್ರೆಸ್ ಮುಖಂಡ ಜಮೀರ್ ಅಹಮದ್ ಖಾನ್ ಹಾಗೂ ರೋಷನ್ ಬೇಗ್ ಮನೆ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
ಜಮೀರ್ ಅಹಮದ್ ಬಡ ಮುಸಲ್ಮಾನರ ಹಣ ನುಂಗಿ ನೀರು ಕುಡಿದಿದ್ದಾರೆ: ಕೆ.ಎಸ್ ಈಶ್ವರಪ್ಪ - Jameer Ahmed khan news
ಜಮೀರ್ ಅಹಮದ್ ಖಾನ್ ಹಾಗೂ ರೋಷನ್ ಬೇಗ್ ಮುಸಲ್ಮಾನರನ್ನು ಉದ್ಧಾರ ಮಾಡ್ತೀವಿ ಎಂದು ಹೇಳಿ ಬಡ ಮುಸಲ್ಮಾನರ ಹಣ ನುಂಗಿ ನೀರು ಕುಡಿದಿದ್ದಾರೆ ಎಂದು ಸಚಿವ ಕೆ.ಎಸ್ಈಶ್ವರಪ್ಪ ಆರೋಪಿಸಿದ್ದಾರೆ.
ನಗರದ ಶಿವಾಜಿ ಎಂಬುವರ ಮನೆಗೆ ಆಗಮಿಸಿದ್ದ ಮಾದರ ಚನ್ನಯ್ಯ ಸ್ವಾಮೀಜಿಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ನಂತರ ಮಾತನಾಡಿದ ಸಚಿವರು, ಇವರು ಮುಸಲ್ಮಾನರನ್ನು ಉದ್ಧಾರ ಮಾಡ್ತೀವಿ ಎಂದು ಹೇಳಿ ಬಡ ಮುಸಲ್ಮಾನರ ಹಣ ನುಂಗಿ ನೀರು ಕುಡಿದಿದ್ದಾರೆ. ಐಟಿ, ಇಡಿ ದಾಳಿಗಳು ರಾಜಕೀಯಪ್ರೇರಿತ ಎಂಬುದು ಶುದ್ಧ ಸುಳ್ಳು ಎಂದರು.
ಈ ಹಿಂದೆಯೂ ಸಹ ವಿನಯ್ ಕುಲಕರ್ಣಿ ಅವರು ನಾನು ಕೊಲೆ ಮಾಡಿಲ್ಲ ಎಂದಿದ್ದರು. ಆದರೆ ಈಗ ಜೈಲಿನಲ್ಲಿದ್ದಾರೆ. ಅದನ್ನು ಅಂದು ಡಿಕೆಶಿ, ಸಿದ್ದರಾಮಯ್ಯ ರಾಜಕೀಯಪ್ರೇರಿತ ಎಂದು ಆರೋಪಿಸಿದ್ದರು. ಜಮೀರ್ ಅಹಮದ್ ಕೂಡಾ ತಾವು ಮಾಡಿರುವ ತಪ್ಪುಗಳನ್ನು ಒಪ್ಪಿಕೊಳ್ಳಲಿ. ಬಡವರ ದುಡ್ಡು ತಿಂದ ಶಾಪ ಇವರಿಗೆ ತಟ್ಟದೇ ಬಿಡುವುದಿಲ್ಲ ಎಂದರು.