ಶಿವಮೊಗ್ಗ: ಸಚಿವ ಯು.ಟಿ. ಖಾದರ್ ಸುದ್ದಿಗೋಷ್ಟಿ ನಡೆಸಿ ಕೇಂದ್ರದ ವಿರುದ್ಧ ಮಾತನಾಡುತ್ತಿದ್ದ ವೇಳೆ ಈಶ್ವರಪ್ಪ ಸ್ಥಳಕ್ಕಾಗಮಿಸಿದರು. ಆ ನಗು ನಗುತ್ತಲೇ, ಬೈದಿದ್ದು ಸಾಕು ಕಾರ್ಯಕ್ರಮಕ್ಕೆ ಬನ್ನಿ ಎಂದು ಆಹ್ವಾನ ನೀಡಿದ ಸನ್ನಿವೇಶವೊಂದು ಕಂಡುಬಂತು.
ಈಶ್ವರಪ್ಪ ಖಾದರ್ ಸುದ್ದಿಗೋಷ್ಟಿ
ಖಾದರ್ ಸುದ್ದಿಗೋಷ್ಟಿ ಮಾಡುತ್ತಿದ್ದ ಸ್ಥಳಕ್ಕೆ ಬಂದು ನಮ್ಮನ್ನು ಬೈದಿದ್ದು ಸಾಕು. ನಮ್ಮ ಕಾರ್ಯಕ್ರಮಕ್ಕೆ ಬನ್ನಿ ಎಂದು ನಗು ಮುಖದಿಂದಲೇ ಈಶ್ವರಪ್ಪ ಆಹ್ವಾನ ನೀಡಿದರು. ಈ ವೇಳೆ ಗಲಿಬಿಲಿಗೊಂಡ ಸಚಿವ ಖಾದರ್, ಈಶ್ವರಪ್ಪಗೆ ಪತ್ಯುತ್ತರ ನೀಡಿ ಅವರನ್ನು ಅಲ್ಲಿಂದ ಕಳಿಸಿಕೊಟ್ಟರು.
ಈಶ್ವರಪ್ಪ ಖಾದರ್ ಸುದ್ದಿಗೋಷ್ಟಿ ನಂತರ ಮಾತನಾಡಿದ ಖಾದರ್, ದೇಶದ ಹಿತ ಕಾಯುವಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ. ನರೇಂದ್ರ ಮೋದಿಯವರು ಚುನಾವಣೆಯ ಮುಂಚೆ ಹೇಳಿದ್ದ ಒಂದು ಮಾತನ್ನೂ ಈಡೇರಿಸಿಲ್ಲ. ದೇಶದ ಭವಿಷ್ಯಕ್ಕೆ ಬೇಕಾದ ಒಂದು ದೊಡ್ಡ ಯೋಜನೆಯನ್ನು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಜಾರಿಗೆ ತರಲಿಲ್ಲ. ಹಾಗೇನಾದ್ರೂ ತಂದಿದ್ದರೆ ಆದನ್ನು ತೋರಿಸಲಿ ಎಂದರು ಎಂದು ಸವಾಲು ಹಾಕಿದರು.
ಕೇಂದ್ರದ ನೀತಿಗಳಿಂದ ನೀತಿ ಆಯೋಗದ ಅಧ್ಯಕ್ಷರು, ಅದರಂತೆ ರಿಸರ್ವ್ ಬ್ಯಾಂಕ್ ಅಧ್ಯಕ್ಷರು ಸಹ ರಾಜೀನಾಮೆ ಕೊಟ್ಟು ಹೋಗುವಂತಾಯಿತು. ಇನ್ನು ಪಾಕಿಸ್ತಾನದ ವಿಚಾರದಲ್ಲಿ ನರೇಂದ್ರ ಮೋದಿ ಸ್ವಲ್ಪವಾದರೂ ಸಹ ಇಂದಿರಗಾಂಧಿಯಂತೆ ನಡೆದುಕೊಳ್ಳಲಿ ಎಂದು ಖಾದರ್ ಆಗ್ರಹಿಸಿದರು.
ಚುನಾವಣೆಗೂ ಮುನ್ನ ಓರ್ವ ಯೋಧನ ತಲೆ ಹೋದ್ರೆ ನಾಲ್ಕು ತಲೆ ತರುವುದಾಗಿ ಹೇಳಿದ್ದ ಮೋದಿ ಪುಲ್ವಾಮಾ ದಾಳಿಯ ನಂತ್ರ ಸುಮ್ಮನೆ ಇರುವುದು ಏಕೆ? ಪಂಜಾಬ್ನ ಪಠಾಣ್ ಕೋಟ್ ದಾಳಿಯ ನಂತ್ರ ಪಾಕಿಸ್ತಾನದ ಐಎಸ್ಐ ತಂಡವನ್ನು ಭಾರತಕ್ಕೆ ಬಿಟ್ಟು ತನಿಖೆ ನಡೆಸಲು ಅವಕಾಶ ಮಾಡಿ ಕೊಟ್ಟಿದ್ದು ಎಷ್ಟು ಸರಿ. ಈ ವಿಚಾರಗಳ ಚರ್ಚೆ ಆಗಬೇಕಿದೆ ಎಂದು ಖಾದರ್ ಒತ್ತಾಯಿಸಿದರು.
ಕಳೆದ ಎಂಟು ತಿಂಗಳಲ್ಲಿ ಬಿಜೆಪಿ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಯತ್ನದಲ್ಲಿ ವಿಫಲರಾಗಿ ರಾಜ್ಯದ ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದಾರೆ. ಬಿಜೆಪಿಯವರು ಟೆಸ್ಟ್ ಮ್ಯಾಚ್ ಆಡಿದರೆ ನಾವು ಒನ್ ಡೇ ಮ್ಯಾಚ್ ಆಡುತ್ತೇವೆ ಎಂದು ಪರೋಕ್ಷವಾಗಿ ಆಪರೇಷನ್ ಕಮಲ ವಿಫಲಕ್ಕೆ ಸಚಿವ ಖಾದರ್ ಟಾಂಗ್ ನೀಡಿದ್ರು.