ಶಿವಮೊಗ್ಗ: ವಿಚ್ಛೇದನ ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದ ಎರಡು ಜೋಡಿಗಳನ್ನು ಹೊಸನಗರ ಕೋರ್ಟ್ನಲ್ಲಿ ಮತ್ತೆ ಒಂದು ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆ ಹೊಸನಗರದ ಕೋರ್ಟ್ನಲ್ಲಿ ಇಂದು ಲೋಕ ಅದಾಲತ್ ನಡೆಯಿತು. ಈ ಅದಾಲತ್ಗೆ ವಿಚ್ಛೇದನ ಪ್ರಕರಣಗಳು ಸಹ ಬಂದಿದ್ದವು. ಇದರಲ್ಲಿ ಹೊಸನಗರ ಪಟ್ಟಣದ ಚರ್ಚ್ ರಸ್ತೆಯ ನವೀದಾ ಎಂಬುವರು ಏಳು ವರ್ಷದ ಹಿಂದೆ ಸಿದ್ದಾಪುರದ ಇಲಿಯಾಸ್ ಎಂಬುವರ ಜೊತೆ ಮದುವೆ ಮಾಡಿಕೊಂಡಿದ್ದರು. ನಂತರ ಇಬ್ಬರು ಡೈವೋರ್ಸ್ ಬೇಕೆಂದು ಕೋರ್ಟ್ ಮೊರೆಹೋಗಿದ್ದರು. ಇಂದು ನಡೆದ ಅದಾಲತ್‌ನಲ್ಲಿ ನ್ಯಾಯಾಧೀಶರು ಮತ್ತೆ ಸಂಸಾರ ನಡೆಸಿಕೊಂಡು ಹೋಗಲು ಸಲಹೆ ನೀಡಿ ಕೋರ್ಟ್ ಹಾಲ್ನಲ್ಲಿಯೇ ಇಲಿಯಾಸ್ ಹಾಗೂ ನವೀದಾರವರಿಗೆ ಹಾರ ಬದಲಾಯಿಸಿ ಮನೆಗೆ ಕಳುಹಿಸಿ ಕೊಟ್ಟಿದ್ದಾರೆ.