ಕರ್ನಾಟಕ

karnataka

ETV Bharat / state

ಉರಗ ತಜ್ಞರನ್ನರಸಿ ಮನೆಗೆ ಬಂದ ಕಲರ್ ಫುಲ್ ಹಾವು!!

ಪಶ್ಚಿಮ ಘಟ್ಟದಲ್ಲಿ ಕಾಣ ಸಿಗುವ ಅಪರೂಪದ ಹಾವೊಂದು ಉರಗ ತಜ್ಞರ ಮನೆಗೆ ಬಂದಿದ್ದ ಅಪರೂಪದ ಘಟನೆ ಜಿಲ್ಲೆಯ ನಗರ ಗ್ರಾಮದ ನಾರಾಯಣ ಕಾಮತ್​ರವರ ಮನೆಯಲ್ಲಿ ನಡೆದಿದೆ.

By

Published : Jul 20, 2019, 8:16 PM IST

ಉರಗ ತಜ್ಞರ ಮನೆಗೆ ಬಂದ ಕಲರ್ ಫುಲ್ ಹಾವು

ಶಿವಮೊಗ್ಗ: ಹಾವುಗಳನ್ನು ಹಿಡಿಯಲು ಉರಗ ತಜ್ಞರು ಹಾವು ಇರುವ ಕಡೆ ಹೋಗುವುದು ಸಾಮಾನ್ಯ. ಆದ್ರೆ, ಪಶ್ಚಿಮ ಘಟ್ಟದಲ್ಲಿ ಅಪರೂಪದ ವಿಷಕಾರಿ ಹಾವೊಂದು ಉರಗ ತಜ್ಞರನ್ನೆ ಅರಸಿ ಬಂದಿದೆ.

ಜಿಲ್ಲೆಯ ನಗರ ಗ್ರಾಮದಉರಗ ತಜ್ಞ ನಾರಾಯಣ ಕಾಮತ್​ರವರ ಮನೆ ಆವರಣದಲ್ಲಿ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ. ಇದನ್ನು ನೋಡಿದ ಕಾಮತ್​ರವರ ಪತ್ನಿ ತೃಪ್ತಿ ಕಾಮತ್ ಪತಿಗೆ ತಿಳಿಸಿದ್ದಾರೆ. ಇದನ್ನು ಗಮನಿಸಿದ ನಾರಾಯಣ ಕಾಮತ್ ಹಾವನ್ನು ಸೇಫಾಗಿ ಹಿಡಿಯುವಲ್ಲಿ ಯಶಸ್ವಿ ಕೂಡ ಆಗಿದ್ದಾರೆ.

ಕಪ್ಪು ಮತ್ತು ಕೆಂಪು ಮಿಶ್ರಿತ ಕೋರಲ್ ಸ್ನೇಕ್

ಇದು ಬಹು ಅಪರೂಪದ ಕೋರಲ್ ಸ್ನೇಕ್:
ಇದು ಕೋರಲ್ ಸ್ನೇಕ್, ಹವಳದ ಹಾವು ಎಂದು ಗುರುತಿಸಿಕೊಂಡಿದೆ. ಮಲೆನಾಡಲ್ಲಿ ಇದನ್ನು ಹಪ್ಪಟೆ ಹಾವು ಎಂದು ಕರೆಯುತ್ತಾರೆ. ಇದು ಅತ್ಯಂತ ವಿಷಕಾರಿಯಾಗಿದೆ. ಆದರೆ ಈ ಹಾವು ಕಚ್ಚಿ ಸತ್ತವರ ಪ್ರಕರಣ ಕಡಿಮೆಯಾಗಿದೆ. ಇದರ ಹಲ್ಲುಗಳು ಮುಂಭಾಗದಲ್ಲಿ ತುಸು ಹೆಚ್ಚು ಬಾಗಿರುವ ಕಾರಣ ಇದು ಕಚ್ಚುವ ಸಂದರ್ಭದಲ್ಲಿ ವಿಷ ಸೇರುವುದು ಕಡಿಮೆ. ಪಶ್ಚಿಮಘಟ್ಟದಲ್ಲಿ ಈ ಹಾವು ಕಂಡುಬರುತ್ತವೆ. ವಿಶೇಷವೆಂದರೆ ಹಾವು ಎರಡು ಬಣ್ಣಗಳಿಂದ ಕೂಡಿದ್ದು, ಮೇಲ್ಬಾಗ ಕಪ್ಪು ಬಣ್ಣವಾಗಿಯೂ, ಕೆಳಭಾಗ ಕೆಂಪುಬಣ್ಣದಲ್ಲಿದ್ದು ಗಮನಸೆಳೆಯುತ್ತವೆ.

ABOUT THE AUTHOR

...view details