ಕರ್ನಾಟಕ

karnataka

ETV Bharat / state

ಶಿರಾದಲ್ಲಿ ಜೆಡಿಎಸ್‌ ಜೊತೆ ಬಿಜೆಪಿ ಹೊಂದಾಣಿಕೆ ಸುಳ್ಳು: ಸಚಿವ ಈಶ್ವರಪ್ಪ

ಶಿರಾ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಚುನಾವಣೆಯಲ್ಲಿ‌ ಸೋಲುವ ಭಯದಲ್ಲಿ‌ ಈ ರೀತಿ ಏನೇನೋ ಹೇಳಿಕೆಗಳನ್ನು ಅವರು‌ ನೀಡುತ್ತಿದ್ದಾರೆ ಎಂದು ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

By

Published : Oct 28, 2020, 3:36 PM IST

Minister Eshwarappa
ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ: ಸಚಿವ ಈಶ್ವರಪ್ಪ ವಿಶ್ವಾಸ

ಶಿವಮೊಗ್ಗ: ಇಂದು ಚುನಾವಣೆ ನಡೆಯುತ್ತಿರುವ ನಾಲ್ಕು ವಿಧಾನ ಪರಿಷತ್ ಹಾಗೂ ಎರಡು ಕ್ಷೇತ್ರದ ಉಪ ಚುನಾವಣೆ ಸೇರಿ ಆರು ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು‌ ಸಾಧಿಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ‌ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದರು.

ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುತ್ತದೆ: ಸಚಿವ ಈಶ್ವರಪ್ಪ ವಿಶ್ವಾಸ

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾನು ಆರು ಕ್ಷೇತ್ರದ‌ ಪ್ರಚಾರಕ್ಕೆ ಹೋಗಿ ಬಂದಿದ್ದೇನೆ. ಎಲ್ಲೆಡೆ ಬಿಜೆಪಿಯ ಅಭ್ಯರ್ಥಿಗಳಿಗೆ ನಿರೀಕ್ಷೆಗೂ ಮೀರಿದ ಬೆಂಬಲವಿದೆ ಎಂದರು.

ಶಿರಾ ಕ್ಷೇತ್ರದಲ್ಲಿ ಸೋಲುವ ಭೀತಿಯಿಂದ ಬಿಜೆಪಿ ಹಾಗೂ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಚುನಾವಣೆಯಲ್ಲಿ‌ ಸೋಲುವ ಭಯದಲ್ಲಿ‌ ಈ ರೀತಿ ಏನೇನೋ ಹೇಳಿಕೆಗಳನ್ನು ಅವರು‌ ನೀಡುತ್ತಿದ್ದಾರೆ.‌ ಜೆಡಿಎಸ್ ಒಂದು ರಾಜಕೀಯ ಪಕ್ಷವಾಗಿದೆ. ಅದು ತನ್ನ ಸ್ಪರ್ಧೆಗೆ ಸ್ವತಂತ್ರವಾಗಿದೆ. ‌ಶಿರಾದಲ್ಲಿ ಜೆಡಿಎಸ್ ಜೊತೆ ಬಿಜೆಪಿ ಹೊಂದಾಣಿಕೆ‌ ಮಾಡಿ‌ಕೊಂಡಿದೆ ಎಂಬ ಆರೋಪ ಸುಳ್ಳು ಎಂದು ಹೇಳಿದರು.

ಗ್ರಾಮ ಪಂಚಾಯತ್ ಚುನಾವಣೆ ವಿಚಾರ

ಕೊರೊನಾ ಇರುವ ಕಾರಣ ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಂದೂಡಿಕೆ ಮಾಡಿ ಎಂದು ಗ್ರಾಮೀಣ‌ ಪ್ರದೇಶದ ಜನರು ಹೇಳುತ್ತಿದ್ದಾರೆ. ಚುನಾವಣೆ ನಡೆಸಲು ಬಿಜೆಪಿ ಸರ್ಕಾರವೇನೋ ಸಿದ್ದವಿದೆ. ಆದರೆ ರಾಜ್ಯದ 6,021 ಗ್ರಾಮ‌ ಪಂಚಾಯತಿಗಳಿಗೆ ಚುನಾವಣೆ ನಡೆದರೆ, ‌ಕೊರೊನಾ ಹೆಚ್ಚಾಗುವ ಭೀತಿ‌ ಇದೆ. ಆದರೆ ಚುನಾವಣಾ ಆಯೋಗ ಹಾಗೂ ನ್ಯಾಯಾಲಯ ಹೇಳಿದ‌ ಮಾತನ್ನು ಕೇಳಲು ನಮ್ಮ ಸರ್ಕಾರವಿದೆ. ಚುನಾವಣೆ ಮುಂದೂಡಿಕೆ ಮಾಡಿ ಎಂದು ಕೇವಲ ಬಿಜೆಪಿ ಅಷ್ಟೇ ಅಲ್ಲ, ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರೂ ಹೇಳುತ್ತಿದ್ದಾರೆ ಎಂದರು.

ABOUT THE AUTHOR

...view details