ಕರ್ನಾಟಕ

karnataka

ETV Bharat / state

ಮಲೆನಾಡಲ್ಲಿ ಆಸ್ಟ್ರೋಪೋರ್ಟ್ ಕೇಂದ್ರ ಸ್ಥಾಪನೆ... ಆಗಸದ ಕೂತೂಹಲಕಾರಿ ಅಂಶಗಳ ಅರಿವಿಗೆ ಉತ್ತೇಜನ - ಸಾಗರ

ನವದೆಹಲಿಯ ಸ್ಪೇಸ್ ಇಂಡಿಯಾ ಸಂಸ್ಥೆ, ದಕ್ಷಿಣ ಭಾರತದ ಮೊದಲ ಖಗೋಳ ಶಾಸ್ತ್ರ ಅಧ್ಯಯನ ಕೇಂದ್ರ, ಆಸ್ಟ್ರೋ ಪೋರ್ಟ್ ಸ್ಥಾಪಿಸಿದೆ. ವಿದೇಶಗಳಲ್ಲಿ, ಖಗೋಳಶಾಸ್ತ್ರ ಅಧ್ಯಯನ ಎಂಬುದು ಕೂತುಹಲದ ವಿಷಯವಾಗಿದ್ದು, ಹಲವಾರು ದೇಶಗಳಲ್ಲಿ ಖಗೋಳ ಶಾಸ್ತ್ರ ಕೇಂದ್ರಗಳನ್ನು ಸ್ಥಾಪಿಸಿ, ಮಕ್ಕಳಲ್ಲಿ ವಿದ್ಯಾರ್ಥಿಗಳಲ್ಲಿ, ಈ ಕುರಿತಂತೆ, ಹೆಚ್ಚಿನ ಆಸಕ್ತಿ ಮೂಡಿಸಲಾಗುತ್ತಿದೆ.

ಆಸ್ಟ್ರೋಪೋರ್ಟ್

By

Published : Apr 28, 2019, 5:41 AM IST

ಶಿವಮೊಗ್ಗ:ಇದೀಗ ಶಿವಮೊಗ್ಗದಲ್ಲಿ ಆಸ್ಟ್ರೋಪೋರ್ಟ್ ಸ್ಥಾಪನೆಯಾಗಿದ್ದು, ಜಿಲ್ಲೆಯ ಸಾಗರದ ತ್ಯಾಗರ್ತಿ ರಸ್ತೆಯಲ್ಲಿರುವ ತಾಷ್ ರೆಸಾರ್ಟ್​ನ 20 ಎಕರೆ ಪ್ರದೇಶದಲ್ಲಿ, ಈ ಕೇಂದ್ರವನ್ನು ನಿರ್ಮಿಸಲಾಗಿದೆ.

ನವದೆಹಲಿಯ ಸ್ಪೇಸ್ ಇಂಡಿಯಾ ಸಂಸ್ಥೆ, ದಕ್ಷಿಣ ಭಾರತದ ಮೊದಲ ಖಗೋಳ ಶಾಸ್ತ್ರ ಅಧ್ಯಯನ ಕೇಂದ್ರ, ಆಸ್ಟ್ರೋ ಪೋರ್ಟ್ ಸ್ಥಾಪಿಸಿದೆ. ವಿದೇಶಗಳಲ್ಲಿ, ಖಗೋಳಶಾಸ್ತ್ರ ಅಧ್ಯಯನ ಎಂಬುದು ಕೂತುಹಲದ ವಿಷಯವಾಗಿದ್ದು, ಹಲವಾರು ದೇಶಗಳಲ್ಲಿ ಖಗೋಳ ಶಾಸ್ತ್ರ ಕೇಂದ್ರಗಳನ್ನು ಸ್ಥಾಪಿಸಿ, ಮಕ್ಕಳಲ್ಲಿ ವಿದ್ಯಾರ್ಥಿಗಳಲ್ಲಿ, ಈ ಕುರಿತಂತೆ, ಹೆಚ್ಚಿನ ಆಸಕ್ತಿ ಮೂಡಿಸಲಾಗುತ್ತಿದೆ.

ಶಿವಮೊಗ್ಗದಲ್ಲಿ ಆಸ್ಟ್ರೋಪೋರ್ಟ್ ಸ್ಥಾಪನೆ

ಇದೀಗ ದೆಹಲಿಯ ಸ್ಪೇಸ್ ಇಂಡಿಯಾ ಸಂಸ್ಥೆಯು, ಶಿವಮೊಗ್ಗದ ಸಾಗರದಲ್ಲಿ ಈ ಕೇಂದ್ರ ಆರಂಭಿಸಲಾಗಿದೆ. ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ, ಚಿಕ್ಕವರು, ದೊಡ್ಡವರು ಎನ್ನದೇ, ಪ್ರತಿಯೊಬ್ಬರಲ್ಲಿಯೂ ಕೂಡ, ಖಗೋಳದಲ್ಲಿ ನಡೆಯುವಂತಹ ಹಲವಾರು ವಿಸ್ಮಯಗಳನ್ನು, ಆಗಸದ ಕೂತೂಹಲಕಾರಿ ಅಂಶಗಳನ್ನು ನೇರವಾಗಿ ಅರ್ಥೈಸುವ ಪ್ರಯತ್ನ ನಡೆಯಲಿದೆ.

ಸಂಪೂರ್ಣವಾಗಿ ನಗರ ಪ್ರದೇಶದಿಂದ ದೂರವಿದ್ದು, ಕಗ್ಗತ್ತಲು ಆವರಿಸಿರುವ ಪ್ರದೇಶವಾಗಿರಬೇಕು. ಇದಕ್ಕೆ ಸಾಗರದ ಶರಾವತಿ ಹಿನ್ನೀರಿನ ಪ್ರದೇಶ ಸೂಕ್ತವಾಗಿದದ್ದು, ಈ ಹಿನ್ನೆಲೆಯಲ್ಲಿ ಖಗೋಳಶಾಸ್ತ್ರ ಕೇಂದ್ರವನ್ನು ಇಲ್ಲಿ ಸ್ಥಾಪಿಸಲಾಗಿದೆ.

ABOUT THE AUTHOR

...view details