ಶಿವಮೊಗ್ಗ: ಆಫ್ರಿಕಾದ ಸುಡಾನ್ ರಾಜ್ಯದಲ್ಲಿ ಸೇನಾ ಪಡೆಗಳ ನಡುವೆ ನಡೆಯುತ್ತಿರುವ ಸಂಘರ್ಷದಲ್ಲಿ ಕರ್ನಾಟಕ ರಾಜ್ಯದವರು ಸಿಲುಕಿಕೊಂಡಿದ್ದಾರೆ. ಇವರೆಲ್ಲಾ ಹಕ್ಕಿಪಿಕ್ಕಿ ಜನಾಂಗದವರಾಗಿದ್ದು, ಅಲ್ಲಿ ತಮ್ಮ ವ್ಯಾಪಾರದ ಸಲುವಾಗಿ ಹೋಗಿದ್ದರು. ರಾಜ್ಯದ 31 ಜನ ಸಿಲುಕಿಕೊಂಡಿದ್ದು, ಇದರಲ್ಲಿ ಶಿವಮೊಗ್ಗದ 7, ಚನ್ನಗಿರಿ 5, ಮೈಸೂರು ಜಿಲ್ಲೆ ಹುಣಸೂರು 19 ಜನ ಸಿಲುಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹೊರಗಡೆ ಬಾಂಬ್ ಸದ್ದು, ಇಲ್ಲಿರುವವರನ್ನು ಭಯಭೀತರನ್ನಾಗಿಸಿದೆ. ಹೊರಗಡೆ ಹೋಗದ ಸ್ಥಿತಿ ಇದ್ದು, ಸಿಕ್ಕ ಅವಕಾಶದಲ್ಲಿ ಹೋಗಿ ದಿನಸಿ, ನೀರು ತೆಗೆದುಕೊಂಡು ಬರುವಂತಾಗಿದೆ. ನಮ್ಮನ್ನು ಇಲ್ಲಿಂದ ಭಾರತಕ್ಕೆ ಕರೆಯಿಸಿಕೊಳ್ಳಿ ಎಂದು ಶಿವಮೊಗ್ಗ ಹಕ್ಕಿಪಿಕ್ಕಿ ಕ್ಯಾಂಪ್ನ ಪ್ರಭು ಭಾರತ ಸರ್ಕಾರವನ್ನು ವಿನಂತಿಸಿಕೊಂಡಿದ್ದಾರೆ.