ಕರ್ನಾಟಕ

karnataka

ETV Bharat / state

ಶಬ್ದ ಮಾಲಿನ್ಯದ ಬಗ್ಗೆ ಸರ್ಕಾರ ಶಿಘ್ರವೇ ನಿರ್ಧಾರ ಪ್ರಕಟಿಸಲಿದೆ.. ಗೃಹ ಸಚಿವ ಆರಗ ಜ್ಞಾನೇಂದ್ರ - Allow Mike to apply within fifteen days of what he permanently wants

ಸಾರ್ವಜನಿಕರ ಆರೋಗ್ಯ ದೃಷ್ಠಿಯಿಂದ ರಾಜ್ಯ ಸರ್ಕಾರ ಮೈಕ್​ ಬಗ್ಗೆ ಆದೇಶ ಹೊರಡಿಸಲಿದೆ. ಇಲ್ಲಿ ಯಾವುದೇ ಧರ್ಮದ ಪ್ರಶ್ನೆ ಇಲ್ಲ. ಮೈಕ್ ಶಾಶ್ವತವಾಗಿ ಬೇಕು ಎನ್ನುವರು 15 ದಿನಗಳ ಒಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಗೃಹಸಚಿವರು ಹೇಳಿದರು.

home minister Araga Jnanendra reaction about azan mike
ಗೃಹ ಸಚಿವ ಆರಗ ಜ್ಞಾನೇಂದ್ರ

By

Published : May 9, 2022, 10:43 PM IST

ಶಿವಮೊಗ್ಗ:ರಾಜ್ಯದಲ್ಲಿ ಚರ್ಚೆ ಆಗುತ್ತಿರುವ ಆಜಾನ್, ಸುಪ್ರಭಾತ ವಿಚಾರ ವಿವಾದ ಕುರಿತು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಅಜಾನ್ ಅಭಿಯಾನಕ್ಕಿಂದ ಆರೋಗ್ಯದ ಪ್ರಶ್ನೆ ಇದೆ. ವಯಸ್ಸಾದವರು, ರೋಗಿಗಳ, ವಿದ್ಯಾರ್ಥಿಗಳ ಹಿತದ ಪ್ರಶ್ನೆ ಇದೆ. ಹಾಗಾಗಿ ಈ ಬಗ್ಗೆ ಸರ್ಕಾರ ಶೀಘ್ರದಲ್ಲಿ ನಿರ್ಧಾರ ಪ್ರಕಟಿಸಲಿದೆ ಎಂದರು.

ಸರ್ಕಾರ ಸುಪ್ರೀಂಕೋರ್ಟ್ ನಿರ್ದೇಶನ ಮತ್ತು ಆದೇಶವನ್ನು ಗಮದಲ್ಲಿಟ್ಟುಕೊಂಡು ಮುಂದುವರೆಯಲಿದೆ. ಇದು ಧರ್ಮದ ಪ್ರಶ್ನೆ ಅಲ್ಲ, ಜನರ ಆರೋಗ್ಯದ ಪ್ರಶ್ನೆ. ಹಾಗಾಗಿ ಸರ್ಕಾರದ ಮಾರ್ಗಸೂಚಿ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳಿಗೆ ಅನ್ವಯಿಸುತ್ತದೆ ಎಂದರು. ಮೈಕ್ ಶಾಶ್ವತವಾಗಿ ಬೇಕು ಎನ್ನುವವರು ಹದಿನೈದು ದಿನಗಳ ಒಳಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಶಬ್ದ ಮಾಲಿನ್ಯದ ಬಗ್ಗೆ ಸರ್ಕಾರ ಶಿಘ್ರವೇ ತನ್ನ ನಿರ್ಧಾರ ಪ್ರಕಟಿಸಲಿದೆ

ಶ್ರೀರಾಮಸೇನೆ ಮುಖ್ಯಸ್ಥ ಮುತಾಲಿಕ್ ಅವರನ್ನು ಒದ್ದು ಒಳಗೆ ಹಾಕಿ ಎಂಬ ಮಾಜಿ ಸಿಎಂ ಹೆಚ್​ ಡಿ ಕುಮಾರ್ ಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಅವರು ಪ್ರತಿಪಕ್ಷದವರು, ಅವರ ಹೇಳಿದಾಕ್ಷಣ ಬಂಧಿಸಲು ಸಾಧ್ಯವಿಲ್ಲ ಎಂದರು.

ಇದೇ ವೇಳೆ ಬೆಂಗಳೂರಿನಲ್ಲಿ ಸಿಕ್ಕಿರುವ ಜೀವಂತ ಮದ್ದುಗುಂಡು ಪತ್ತೆ ವಿಚಾರವಾಗಿ ಮಾತನಾಡಿ, ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ:ಎಂಡಿಎಫ್​ ಕೃತ್ಯಕ್ಕೆ ಕಾಂಗ್ರೆಸ್, ಜೆಡಿಎಸ್ ಮತ್ತು ಸರ್ಕಾರದಿಂದ ನೇರವಾಗಿ ಬೆಂಬಲ: ಚಕ್ರವರ್ತಿ ಸೂಲಿಬೆಲೆ

ABOUT THE AUTHOR

...view details