ಕರ್ನಾಟಕ

karnataka

ETV Bharat / state

ಯುವತಿಗೆ ಲಿವರ್ ಆಪರೇಷನ್​​: ಝೀರೋ ಟ್ರಾಫಿಕ್​​ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ರವಾನೆ

ಶಿವಮೊಗ್ಗ ಜಿಲ್ಲೆ ಭದ್ರಾವತಿಯ18 ವರ್ಷದ ಯುವತಿಯು ಕಳೆದ ವಾರ ವಾಂತಿ ಮಾಡಿಕೊಂಡಿದ್ದಳು. ತಕ್ಷಣ ಭದ್ರಾವತಿಯ ನಿರ್ಮಲ‌ ಆಸ್ಪತ್ರೆಗೆ ಆಕೆಯನ್ನು ದಾಖಲು ಮಾಡಲಾಯಿತು. ಐದು ದಿನದ ಪರೀಕ್ಷೆಯ ನಂತರ ಯುವತಿಗೆ ಲೀವರ್ ಡ್ಯಾಮೇಜ್ ಆಗಿರುವ ಅಂಶ ತಿಳಿದುಬಂದಿತ್ತು. ಈಗ ಯುವತಿಯನ್ನು ಶಿವಮೊಗ್ಗದಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್​ನಲ್ಲಿ ಕರೆದೊಯ್ಯಲಾಗಿದೆ.

ಶಿವಮೊಗ್ಗದ ಯುವತಿಗೆ ಲಿವರ್ ಆಪರೇಷನ್​​
ಶಿವಮೊಗ್ಗದ ಯುವತಿಗೆ ಲಿವರ್ ಆಪರೇಷನ್​​

By

Published : Jun 9, 2022, 6:56 PM IST

Updated : Jun 9, 2022, 7:52 PM IST

ಶಿವಮೊಗ್ಗ: ಇಲ್ಲಿನ ಯುವತಿಯೋರ್ವಳಿಗೆ ಆಪರೇಷನ್​​​ ಮಾಡಿಸುವ ಉದ್ದೇಶದಿಂದ ಶಿವಮೊಗ್ಗದಿಂದ ಬೆಂಗಳೂರಿಗೆ ಆ್ಯಂಬುಲೆನ್ಸ್​ ಮೂಲಕ ಝೀರೋ ಟ್ರಾಫಿಕ್​​​ನಲ್ಲಿ ಕರೆದೊಯ್ಯಲಾಗಿದೆ. ಯುವತಿಗೆ ಲಿವರ್ ವರ್ಗಾವಣೆ ಮಾಡುವ ಉದ್ದೇಶದಿಂದ ಈ ನಿಯಮ ಅನುಸರಿಸಲಾಗಿದೆ.

ಭದ್ರಾವತಿಯ ನಿವಾಸಿಯಾಗಿರುವ 18 ವರ್ಷದ ಯುವತಿ ಕಳೆದ ವಾರ ವಾಂತಿ ಮಾಡಿಕೊಂಡಿದ್ದಳು. ತಕ್ಷಣ ಭದ್ರಾವತಿಯ ನಿರ್ಮಲ‌ ಆಸ್ಪತ್ರೆಗೆ ಆಕೆಯನ್ನು ದಾಖಲು ಮಾಡಲಾಯಿತು. ಐದು ದಿನದ ಪರೀಕ್ಷೆಯ ನಂತರ ರಾಧಿಕಾಗೆ ಲೀವರ್ ಡ್ಯಾಮೇಜ್ ಆಗಿರುವ ಅಂಶ ತಿಳಿದುಬಂದಿತ್ತು. ನಂತರ ಶಿವಮೊಗ್ಗದ ನಾರಾಯಣ ಹೃದಯಾಲಯಕ್ಕೆ ಕರೆ ತಂದು ದಾಖಲು ಮಾಡಲಾಗಿತ್ತು.

ಯುವತಿಗೆ ಲಿವರ್ ಆಪರೇಷನ್​​: ಝೀರೋ ಟ್ರಾಫಿಕ್​​ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ರವಾನೆ

ತುರ್ತಾಗಿ ಲೀವರ್ ಆಪರೇಷನ್ ನಡೆಸಬೇಕಾದ ಕಾರಣ ಅವರನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ರವಾನೆ ಮಾಡುವ ಉದ್ದೇಶದಿಂದ ಶಿವಮೊಗ್ಗದಿಂದ ಬೆಂಗಳೂರಿಗೆ ರೋಗಿಯನ್ನು ಝೀರೋ ಟ್ರಾಫಿಕ್ ನಲ್ಲಿ ಆ್ಯಂಬುಲೆನ್ಸ್ ಚಾಲಕ ಸದ್ದಾಂ ಹುಸೇನ್ ‌‌‌ಕರೆದೊಯ್ಯುತ್ತಿದ್ದಾರೆ.

ನ್ಯಾಷನಲ್ ಆ್ಯಂಬುಲೆನ್ಸ್ ಚಾಲಕ ಸದ್ದಾಂ ಹುಸೇನ್ ಅವರು ಕಳೆದ ಬಾರಿ ಆ್ಯಂಬುಲೆನ್ಸ್ ನಲ್ಲಿ 2 ಗಂಟೆ 45 ನಿಮಿಷಕ್ಕೆ ರೋಗಿಯೊಬ್ಬರನ್ನು ಬೆಂಗಳೂರಿಗೆ ತಲುಪಿಸಿದ್ದರು. ಅದರಂತೆ ಇಂದು ಸಹ ಈ ಯುವತಿಯನ್ನು ತಲುಪಿಸುವ ವಿಶ್ವಾಸವನ್ನು ಚಾಲಕ ಸದ್ದಾಂ ಹುಸೇನ್ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಶಬರಿಧಾಮ ಮಂದಿರ ಟ್ರಸ್ಟಿ ಸ್ಥಾನದಿಂದ ಗುಜರಾತ್​ ಬಿಜೆಪಿ ಶಾಸಕ ವಜಾ: ಕಾರಣ ನಿಗೂಢ

Last Updated : Jun 9, 2022, 7:52 PM IST

ABOUT THE AUTHOR

...view details