ಕರ್ನಾಟಕ

karnataka

ETV Bharat / state

ಶಿರಾಳಕೊಪ್ಪದ ಫರ್ನಿಚರ್ ಶಾಪ್​ನಲ್ಲಿ ಆಕಸ್ಮಿಕ ಬೆಂಕಿ: 7 ಲಕ್ಷ ಮೌಲ್ಯದ ವಸ್ತು ಬೆಂಕಿಗಾಹುತಿ - ಶಿರಾಳಕೊಪ್ಪ ಪೊಲೀಸ್ ಠಾಣೆ

ಅಗ್ನಿಶಾಮಕ ದಳವರು ಸ್ಥಳಕ್ಕೆ ಬಂದು ಬೆಂಕಿ ನಂದಿಸಿದ್ದಾರೆ. ಆದರೆ, ಅಷ್ಟರಲ್ಲಿ ಬೆಂಕಿಯಿಂದ ಅಂಗಡಿಯಲ್ಲಿ ಸಿದ್ಧವಾದ ಅನೇಕ ಫರ್ನಿಚರ್​ಗಳು ಸುಟ್ಟು ಕರಕಲಾಗಿವೆ.

Accidental fire at furniture shop in Shiralakoppa: Goods worth 7 lakhs gutted
ಶಿರಾಳಕೊಪ್ಪದ ಫರ್ನಿಚರ್ ಶಾಪ್​ನಲ್ಲಿ ಆಕಸ್ಮಿಕ ಬೆಂಕಿ: 7 ಲಕ್ಷ ಮೌಲ್ಯದ ವಸ್ತು ಬೆಂಕಿಗಾಹುತಿ

By

Published : Nov 14, 2022, 3:34 PM IST

ಶಿವಮೊಗ್ಗ:ಫರ್ನಿಚರ್ ಅಂಗಡಿಗೆ ಆಕಸ್ಮಿಕ ಬೆಂಕಿ ತಗುಲಿ ಸುಮಾರು‌ 7 ಲಕ್ಷ ಮೌಲ್ಯದ ಸಿದ್ಧ ಫರ್ನಿಚರ್​ಗಳು ಸುಟ್ಟು ಹೋಗಿರುವ ಘಟನೆ ಶಿಕಾರಿಪುರ ತಾಲೂಕು ಶಿರಾಳಕೊಪ್ಪ ಪಟ್ಟಣದಲ್ಲಿ ನಡೆದಿದೆ. ಶಿರಾಳಕೊಪ್ಪದ ಶಿಕಾರಿಪುರ ರಸ್ತೆಯ ಭಾರತ್ ಫರ್ನಿಚರ್ಸ್ ಅಂಗಡಿಯಲ್ಲಿ ರಾತ್ರಿ ಸುಮಾರು 2:30 ರ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದೆ. ಈ ಶಾಪ್ ಶಫಿವುಲ್ಲಾ ಅವರಿಗೆ ಸೇರಿದ್ದಾಗಿದ್ದು, ರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಕಾರಣ ಅಂಗಡಿ ಸಂಪೂರ್ಣವಾಗಿ ಸುಟ್ಟು ಹೋಗಿದೆ.

ಶಿರಾಳಕೊಪ್ಪದ ಫರ್ನಿಚರ್ ಶಾಪ್​ನಲ್ಲಿ ಆಕಸ್ಮಿಕ ಬೆಂಕಿ: 7 ಲಕ್ಷ ಮೌಲ್ಯದ ವಸ್ತು ಬೆಂಕಿಗಾಹುತಿ

ಬೆಂಕಿ ಹತ್ತಿಕೊಂಡ ವಿಚಾರ ತಿಳಿದ ತಕ್ಷಣ ಪೊಲೀಸರು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿದೆ. ಅಗ್ನಿಶಾಮಕ ದಳವರು ಸ್ಥಳಕ್ಕೆ ಬಂದು ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಬೆಂಕಿಯಿಂದ ಅಂಗಡಿಯಲ್ಲಿ ಸಿದ್ಧವಾದ ಅನೇಕ ಫರ್ನಿಚರ್​ಗಳು ಸುಟ್ಟು ಕರಕಲಾಗಿವೆ. ಇದರಿಂದ ಸುಮಾರು 7 ಲಕ್ಷ ರೂ ನಷ್ಟ ಉಂಟಾಗಿದ್ದು ಈ ಕುರಿತು ಶಿರಾಳಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಭದ್ರಾವತಿಯಲ್ಲಿ ಯುವಕರ ನಡುವೆ ಗಲಾಟೆ: ಮೂವರಿಗೆ ಚಾಕು ಇರಿತ, ಕಲ್ಲು ತೂರಾಟಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details