ಕರ್ನಾಟಕ

karnataka

ವಿದ್ಯಾಗಮ ಯೋಜನೆ: ಮಕ್ಕಳಿದ್ದಲ್ಲಿಗೆ ತೆರಳಿ ಪಾಠ ಮಾಡುತ್ತಿರುವ ಶಿಕ್ಷಕರು!

ಜಗಲಿಕಟ್ಟೆ, ದೇವಸ್ಥಾನದ ಆವರಣ, ಹಳ್ಳಿ ಮನೆಗಳ ಪಡಸಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿರುವ ಸರ್ಕಾರಿ ಶಾಲಾ ಶಿಕ್ಷಕರು ವಿದ್ಯಾಗಮ ಯೋಜನೆ ಯಶಸ್ಸಿಗೆ‌ ಶ್ರಮಿಸುತ್ತಿದ್ದಾರೆ.

By

Published : Aug 18, 2020, 11:44 PM IST

Published : Aug 18, 2020, 11:44 PM IST

ಮಕ್ಕಳಿದ್ದಲ್ಲೇ ತೆರಳಿ ಪಾಠ ಮಾಡುತ್ತಿರುವ ಶಿಕ್ಷಕರು
ಮಕ್ಕಳಿದ್ದಲ್ಲೇ ತೆರಳಿ ಪಾಠ ಮಾಡುತ್ತಿರುವ ಶಿಕ್ಷಕರು

ರಾಮನಗರ:ಶಿಕ್ಷಕರೇ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಹೋಗಿ ಪಾಠ ಮಾಡಲು ಆರಂಭಿಸಿದ್ದಾರೆ. ಅದಕ್ಕೆ ಪ್ರೇರಣೆಯಾಗಿರುವುದು ಸರ್ಕಾರ‌ ಘೋಷಿಸಿರುವ ವಿದ್ಯಾಗಮ ಯೋಜನೆ. ಜಗಲಿಕಟ್ಟೆ, ದೇವಸ್ಥಾನದ ಆವರಣ, ಹಳ್ಳಿ ಮನೆಗಳ ಪಡಸಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿರುವ ಸರ್ಕಾರಿ ಶಾಲಾ ಶಿಕ್ಷಕರು, ವಿದ್ಯಾಗಮ ಯೋಜನೆ ಯಶಸ್ಸಿಗೆ‌ ಶ್ರಮಿಸುತ್ತಿದ್ದಾರೆ.

ಮಕ್ಕಳಿದ್ದಲ್ಲೇ ತೆರಳಿ ಪಾಠ ಮಾಡುತ್ತಿರುವ ಶಿಕ್ಷಕರು

ಜಿಲ್ಲೆಯ ಬಹುತೇಕ ಹಳ್ಳಿಗಳಲ್ಲಿ ಶಿಕ್ಷಕರೇ ಮನೆ ಮನೆಗೆ ಹೋಗಿ ವಿದ್ಯಾರ್ಥಿಗಳನ್ನ ಒಂದೆಡೆ ಸೇರಿಸಿಕೊಂಡು ಪಾಠ ಹೇಳಿಕೊಡುತ್ತಿದ್ದೇವೆ. ಗ್ರಾಮಗಳಲ್ಲಿನ ದೊಡ್ಡ ಪಡಸಾಲೆಗಳು, ದೇವಸ್ಥಾನದ ಆವರಣ, ಅರಳಿಕಟ್ಟೆಯಲ್ಲಿ ಮಕ್ಕಳನ್ನ ಕೂರಿಸಿಕೊಂಡು ಮಾಸ್ಕ್ ಹಾಕಿಸಿ, ಸಾಮಾಜಿಕ ಅಂತರ ಕಾಪಾಡುವ ಮೂಲಕ ಮಕ್ಕಳಿಗೆ ಬೋಧನೆ ಮಾಡುತ್ತಿದ್ದೇವೆ. ಈ ವೇಳೆ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಿಕ್ಷಕಿ ನಿರ್ಮಲ ತಿಳಿಸಿದ್ದಾರೆ.

ಗ್ರಾಮೀಣ ಭಾಗದ ಖಾಸಗಿ ಶಾಲೆಯ ಮಕ್ಕಳು ಕೂಡ ಇಲ್ಲಿ ಬಂದು ಪಾಠ ಕೇಳುತ್ತಿದ್ದಾರೆ. ಮಕ್ಕಳು ಕೂಡ ಶಿಕ್ಷಕರ ಮನವಿಗೆ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.

ABOUT THE AUTHOR

...view details