ಕರ್ನಾಟಕ

karnataka

ETV Bharat / state

ರಾಮನಗರ ಜಿಲ್ಲೆಯಲ್ಲಿ ಉತ್ತಮ ಹಿಂಗಾರು ಮಳೆ: ರೈತರಲ್ಲಿ ಸಂತಸ

ರಾಮನಗರ ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಹಿಂಗಾರು ಮಳೆಯಾಗಿದ್ದು, ರಾಗಿ ಮತ್ತು ಭತ್ತ ಬಿತ್ತನೆ ಪ್ರಮಾಣ ನಿರೀಕ್ಷೆಗಿಂತ ಹೆಚ್ಚಾಗಿದೆ.

By

Published : Oct 20, 2019, 10:08 AM IST

ರಾಮನಗರ ಜಿಲ್ಲೆಯಲ್ಲಿ ಉತ್ತಮ ಹಿಂಗಾರು ಮಳೆ

ರಾಮನಗರ:ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಹಿಂಗಾರು ಮಳೆಯಾಗಿದ್ದು, ಈ ಭಾಗದ ರೈತರು ಹರ್ಷಗೊಂಡಿದ್ದಾರೆ. ವಾಡಿಕೆಗಿಂತಲೂ ಹೆಚ್ಚು ಮಳೆಯಾಗಿರುವ ಹಿನ್ನೆಲೆ ಪ್ರಮುಖವಾಗಿ ರಾಗಿ, ಭತ್ತದ ಬೆಳೆಗಳಲ್ಲಿ ಉತ್ತಮ ಫಸಲನ್ನು ನಿರೀಕ್ಷಿಸಲಾಗಿದೆ.

ರಾಮನಗರ ಜಿಲ್ಲೆಯಾದ್ಯಂತ ಕಳೆದ ಮೂರು ತಿಂಗಳಿಂದ ಉತ್ತಮ ಮಳೆಯಾಗಿದ್ದು, ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ ಕ್ಷೇತ್ರದಲ್ಲಿ ಸಾಕಷ್ಟು ಮಳೆಯಾಗಿದೆ. ಆಗಸ್ಟ್‌ನಿಂದ ಅಕ್ಟೋಬರ್​​ವರೆಗೆ 447 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಇಲ್ಲಿಯವೆರೆಗೆ 450 ಮಿ.ಮೀ. ಮಳೆಯಾಗುವ ಮೂಲಕ ಜಿಲ್ಲೆಯ ರೈತರು ಕೃಷಿ ಚಟುವಟಿಕೆ ಮಾಡುವುದಕ್ಕೆ ಅನುಕೂಲವಾಗಿದೆ. ಈ ಬಗ್ಗೆ ಮಾತನಾಡಿರುವ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು, ಜುಲೈ ತಿಂಗಳಲ್ಲಿ ಮಳೆಯ ಕೊರತೆ ಎದುರಾಗಿತ್ತು. ಆದರೆ ನಂತರದ ದಿನಗಳಲ್ಲಿ ಎಲ್ಲವೂ ಸರಿ ಹೋಗಿದೆ ಎಂದಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಉತ್ತಮ ಹಿಂಗಾರು ಮಳೆ


ಜಿಲ್ಲೆಯಲ್ಲಿ ಮಳೆಯಾಗಿರುವ ಸರಾಸರಿ:

ರಾಮನಗರ - 82%

ಚನ್ನಪಟ್ಟಣ - 78%
ಕನಕಪುರ - 75%
ಮಾಗಡಿ - 86%

ರಾಮನಗರ ಜಿಲ್ಲೆಯಲ್ಲಿ ರಾಗಿ ಮತ್ತು ಭತ್ತದ ಬಿತ್ತನೆ ಪ್ರಮಾಣ:
ಒಟ್ಟು - 1.14 ಲಕ್ಷ ಹೆಕ್ಟೇರ್ ರಾಗಿ ಬಿತ್ತನೆ ಗುರಿ ಇತ್ತು, ಸದ್ಯಕ್ಕೆ 90.771 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ
ಅಂದರೆ ಜಿಲ್ಲೆಯಲ್ಲಿ ಒಟ್ಟು ಶೇ. 80ರಷ್ಟು ರಾಗಿ ಬಿತ್ತನೆ ಕಾರ್ಯ ನಡೆದಿದೆ.
ಭತ್ತ ಒಟ್ಟು - 5.600 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಬೇಕಿತ್ತು. ಈವರೆಗೆ ಭತ್ತ - 4.251 ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿದೆ.

ABOUT THE AUTHOR

...view details