ಕರ್ನಾಟಕ

karnataka

ETV Bharat / state

ಮೊದಲ ಹೆಂಡತಿ ಹತ್ಯೆಗಾಗಿ ಜೈಲ್​ ಸೇರಿದ್ದ ಆಸಾಮಿ: ಬೇಲ್​ನಲ್ಲಿ ಹೊರಗೆ ಬಂದು 2ನೇ ಮಡದಿಯನ್ನೂ ಕೊಂದ - ಈಟಿವಿ ಭಾರತ ಕನ್ನಡ

ಮೊದಲ ಹೆಂಡತಿ ಕೊಂದು ಜೈಲಿಗೆ ಹೋಗಿದ್ದವನು ಬೇಲ್​ನಲ್ಲಿ ಹೊರಗೆ ಬಂದು ಇನ್ನೊಂದು ಮದುವೆ ಆಗಿದ್ದು. ಈಗ ಆಕೆಯನ್ನೂ ಕೊಂದು ಮತ್ತೆ ಕಂಬಿ ಹಿಂದೆ ಸೇರಿದ್ದಾನೆ.

Etv Bharat
ಮೊದಲ ಹೆಂಡತಿ ಹತ್ಯೆಗೆ ಜೈಲ್​ ಸೇರಿದ್ದ ಆಸಾಮಿ

By

Published : Nov 22, 2022, 10:44 PM IST

ರಾಮನಗರ:ಕುಡಿದ ಮತ್ತಿನಲ್ಲಿ ಪತ್ನಿಗೆ ದೊಣ್ಣೆಯಿಂದ ಹೊಡೆದು ಬರ್ಬರ ಕೊಲೆ ಮಾಡಿರುವ ಘಟನೆ ರಾಮನಗರ ತಾಲೂಕಿನ ಅಮ್ಮನಾಪುರ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಭದ್ರಮ್ಮ 40 ವರ್ಷ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ರಾತ್ರಿ ಕುಡಿದ ಮತ್ತಿನಲ್ಲಿ ಪತ್ನಿಗೆ, ಪತಿ ಬೋರಯ್ಯ (53) ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಇದೇ ರೀತಿಯಲ್ಲಿ 2014 ರಲ್ಲಿ ಕನಕಪುರದಲ್ಲಿ ಮೊದಲ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಕೇಸ್​ಗೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಹೊರ ಬಂದು ಭದ್ರಮ್ಮನನ್ನು ವಿವಾಹವಾಗಿದ್ದ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ರಾಮನಗರ ಗ್ರಾಮಾಂತರ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಬೋರಯ್ಯನನ್ನು ವಶಕ್ಕೆ ಪಡೆದುಕೊಂಡ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ:ಅಂತರ್ಜಾತಿ ವಿವಾಹ..12 ದಿನದಲ್ಲಿ ಜನ್ಮದಿನ ಆಚರಿಸಿಕೊಳ್ಳಬೇಕಿದ್ದ ಮಗಳ ಹತ್ಯೆ.. ಚಿತೆಗೆ ಬೆಂಕಿಯಿಟ್ಟ ಕೊಲೆಗಾರ ಅಪ್ಪ

ABOUT THE AUTHOR

...view details