ಕರ್ನಾಟಕ

karnataka

ETV Bharat / state

ಏಸು ಪ್ರತಿಮೆ ಸ್ಥಾಪನೆ: ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್

ಸರ್ಕಾರದ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳುವ ಸಲುವಾಗಿ ಸಚಿವರ ಆದೇಶದ ಮೇರೆಗೆ ಉಪವಿಭಾಗಾಧಿಕಾರಿ ದಾಕ್ಷಾಯಿಣಿ, ಕನಕಪುರ ತಹಶೀಲ್ದಾರ್ ಆನಂದಯ್ಯ ಸ್ಥಳ ಪರಿಶೀಲನೆ‌ ನಡೆಸಿದ್ದಾರೆ.

By

Published : Dec 28, 2019, 3:00 PM IST

Establishment of the Statue of Jesus
ಸ್ಥಳ ಪರಿಶೀಲನೆ ನಡೆಸಿದ ತಹಶೀಲ್ದಾರ್

ರಾಮನಗರ:ಕನಕಪುರದ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಿಸುವ ವಿಚಾರದ ವಿವಾದ ದಿನೇ ದಿನೇ‌ ರಂಗೇರುತ್ತಿದೆ.

ಈ ಸಂದರ್ಭದಲ್ಲಿ ಸರ್ಕಾರದ ಭೂಮಿಯನ್ನು ವಶಕ್ಕೆ ಪಡೆದುಕೊಳ್ಳುವ ಸಲುವಾಗಿ ಸಚಿವರ ಆದೇಶದ ಮೇರೆಗೆ ಉಪವಿಭಾಗಾಧಿಕಾರಿ ದಾಕ್ಷಾಯಿಣಿ, ಕನಕಪುರ ತಹಶೀಲ್ದಾರ್ ಆನಂದಯ್ಯ ಸ್ಥಳಕ್ಕೆ ಪರಿಶೀಲನೆ‌ ನಡೆಸಿದ್ದಾರೆ.

ಕಂದಾಯ ಸಚಿವ ಆರ್​.ಅಶೋಕ್ ಅವರು ಪ್ರತಿರೋಧ ವ್ಯಕ್ತಪಡಿಸಿದ್ದು, ಸರ್ಕಾರ ಕೂಡ ಜಮೀನು ವಶಕ್ಕೆ ಮುಂದಾಗಿದೆ. ಇದರ‌ ಬೆನ್ನಲ್ಲೇ ಅಧಿಕಾರಿಗಳ ಜೊತೆಗೆ ಉಪವಿಭಾಗಾಧಿಕಾರಿ ಭೇಟಿ‌ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಕಪಾಲ ಬೆಟ್ಟಕ್ಕೆ‌ ಎಐಸಿಸಿ ಅಲ್ಪಸಂಖ್ಯಾತ ಘಟಕದ ತಂಡ‌ವೂ ಭೇಟಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಪಾಲಬೆಟ್ಟ ಅಭಿವೃದ್ದಿ ಸಮಿತಿ ಹೆಸರಿನಲ್ಲಿ ಏಸು ಪ್ರತಿಮೆ‌ ನಿರ್ಮಾಣದ ಉದ್ದೇಶದಿಂದ 10 ಎಕರೆ ಸರ್ಕಾರಿ ಭೂಮಿ ಮಂಜೂರು ಮಾಡಲಾಗಿತ್ತು. ಅದಕ್ಕೆ ಸರ್ಕಾರ‌ ನಿಗದಿಪಡಿಸಿದ್ದ ಮೊತ್ತವನ್ನು ಡಿ.ಕೆ.ಶಿವಕುಮಾರ್ ಅವರೇ ಸಂದಾಯ ಮಾಡಿದ್ದರು.

ABOUT THE AUTHOR

...view details