ಕರ್ನಾಟಕ

karnataka

ETV Bharat / state

ರಾಜಧಾನಿಗೆ ವಾಪಸಾದ ಡಿಕೆಶಿ.. ಶಕ್ತಿ ದೇವತೆ ಮೊರೆಹೋದ ಅಭಿಮಾನಿಗಳು..

ಮಾಜಿ ಸಚಿವ ಡಿ ಕೆ ಶಿವಕುಮಾರ್‌ ಅವರು ಬೆಂಗಳೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಡಿ ಕೆ ಬ್ರದರ್ಸ್‌ ಅಭಿಮಾನಿಗಳು ಕನಕಪುರದ ಶಕ್ತಿ ದೇವತೆ ಆರಾಧ್ಯ ದೈವ ಕಬ್ಬಾಳಮ್ಮ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿದ್ದಾರೆ.

ಅಭಿಮಾನಿಗಳಿಂದ ವಿಶೇಷ ಪೂಜೆ

By

Published : Oct 26, 2019, 5:09 PM IST

ರಾಮನಗರ:ಜಾಮೀನಿನ ಮೇಲೆ ಬಿಡುಗಡೆಯಾದ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಅವರು ಇಂದು ಬೆಂಗಳೂರಿಗೆ ಬಂದಿಳಿದ ಹಿನ್ನೆಲೆಯಲ್ಲಿ ಡಿ.ಕೆ.ಬ್ರದರ್ಸ್ ಅಭಿಮಾನಿಗಳು ಕನಕಪುರದ ಶಕ್ತಿ ದೇವತೆ ಆರಾಧ್ಯ ದೈವ ಕಬ್ಬಾಳಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ‌ ಸಲ್ಲಿಸಿದ್ದಾರೆ.

ಇದನ್ನೂ ಓದಿ...ಡಿಕೆಶಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಿದ ದೆಹಲಿ ಹೈಕೋರ್ಟ್‌

ಡಿಕೆಶಿ ಅವರ ಇಷ್ಟದೇವತೆ ಕಬ್ಬಾಳಮ್ಮ ತಾಯಿಗೆ ವಿಶೇಷ ಹೂವಿನ ಅಲಂಕಾರ ಮಾಡಿದ್ದಾರೆ. ವಿಶೇಷ ಪೂಜೆ ಸಲ್ಲಿಸುವ ಮೂಲಕ ನೆಚ್ಚಿನ ನಾಯಕನಿಗೆ ಶುಭವಾಗಲೆಂದು ಹಾರೈಸಿದ್ದಾರೆ. ಜೊತೆಗೆ ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೆ, ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

ಅಭಿಮಾನಿಗಳಿಂದ ವಿಶೇಷ ಪೂಜೆ

ಡಿ.ಕೆ.ಶಿವಕುಮಾರ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್​ ಜೈಲು ಸೇರಿದ್ದರು. ಜೈಲು ಸೇರಿದ 50 ದಿನಗಳ ಬಳಿಕ ಜಾಮೀನು ದೊರೆತಿದೆ.

ABOUT THE AUTHOR

...view details