ರಾಮನಗರ: ಮೇಕೆದಾಟು ಪಾದಯಾತ್ರೆ ನಡೆಸುವ ಸ್ಥಳ ಪರಿಶೀಲನೆಗಾಗಿ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕನಕಪುರದ ಮೇಕೆದಾಟಿಗೆ ಆಗಮಿಸಿ ಪರಿಶೀಲನೆ ನಡೆಸಿದರು.
ಮೇಕೆದಾಟಿಗೆ ಆಗಮಿಸಿ ಪರಿಶೀಲನೆ: ಹೋರಾಟ ಮಾಡುವುದಾಗಿ ಶಪಥ ಮಾಡಿದ ಡಿಕೆಶಿ - ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಥಳ ಪರಿಶೀಲನೆಗಾಗಿ ಮೇಕೆದಾಟಿಗೆ ಆಗಮಿಸಿದ್ದು, ಈ ವೇಳೆ ಅರ್ಕಾವತಿ ಕಾವೇರಿ ನದಿ ಸಂಗಮವಾಗುವ ಸ್ಥಳದಲ್ಲಿ ನೀರನ್ನ ಕುಡಿದು ನೀರಿಗಾಗಿ ಹೋರಾಟ ಮಾಡುವುದಾಗಿ ಶಪಥ ಮಾಡಿದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಇದೇ ಡಿಸೆಂಬರ್ ತಿಂಗಳಿನಲ್ಲಿ ಮೇಕೆದಾಟು ಯೋಜನೆ ಜಾರಿಗೊಳಿಸುವಂತೆ ಒತ್ತಾಯಿಸಿ ಪಾದಯಾತ್ರೆ ಮಾಡಲು ಸಜ್ಜಾಗುತ್ತಿದೆ. ಈ ಬೆನ್ನಲ್ಲೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸ್ಥಳ ಪರಿಶೀಲನೆಗಾಗಿ ಮೇಕೆದಾಟಿಗೆ ಆಗಮಿಸಿದ್ದರು. ಈ ವೇಳೆ ಅರ್ಕಾವತಿ ಕಾವೇರಿ ನದಿ ಸಂಗಮವಾಗುವ ಸ್ಥಳದಲ್ಲಿ ನೀರನ್ನ ಕುಡಿದು ನೀರಿಗಾಗಿ ಹೋರಾಟ ಮಾಡುವುದಾಗಿ ಶಪಥ ಮಾಡಿದರು.
ಈ ಹಿಂದೆ ಸಮ್ಮಿಶ್ರ ಅರ್ಕಾರದಲ್ಲಿ ಡಿಕೆಶಿ ಸಚಿವರಾಗಿದ್ದ ಸಂದರ್ಭದಲ್ಲಿ ಮೇಕೆದಾಟು ಯೋಜನೆಯ ಡಿಪಿಆರ್ ಸಿದ್ಧಗೊಳಿಸಿ ಅಧಿಕಾರಿಗಳ ತಂಡದ ಜೊತೆಗೆ ಸ್ಥಳ ಪರಿಶೀಲನೆ ನಡೆಸಿ ಯೋಜನೆಗೆ ಅಂದೇ ಹಸಿರು ನಿಶಾನೆ ತೋರಿದ್ದರು. ರಾಜಕೀಯ ಸ್ಥಿತ್ಯಂತರದ ನಡುವೆ ಯೋಜನೆಯು ಕೂಡ ಅರ್ಧದಲ್ಲಿ ನಿಂತುಹೋಯ್ತು. ನಂತ್ರ ಬಿಜೆಪಿ ಸರ್ಕಾರದಲ್ಲೂ ಮೇಕೆದಾಟು ಯೋಜನೆಯ ಕಾರ್ಯಗತ ಮಾಡುವುದಾಗಿ ಹೇಳುತ್ತಿದೆ ಅಷ್ಟೇ. ಆದ್ರೆ ಇದುವರೆಗೂ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಈ ಹಿನ್ನಲೆಯಲ್ಲಿ ಇದೇ ಡಿಸೆಂಬರ್ ತಿಂಗಳಿನಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಮೇಕೆದಾಟಿನಿಂದ ಬೆಂಗಳೂರಿನ ವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಈಗಾಗಲೆ ತಿರ್ಮಾನ ಮಾಡಲಾಗಿದೆ. ಈ ಹಿನ್ನಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಕೆದಾಟಿಗೆ ಬಂದು ಸುಮಾರು ಎರಡು ಗಂಟೆಗಳ ಕಾಲ ಸ್ಥಳದಲ್ಲೆ ಇದ್ದು, ಹೋರಾಟದ ರೂಪು ರೇಷೆಯನ್ನ ಸಿದ್ಧತೆಗೊಳಿಸಿದರು.