ಕರ್ನಾಟಕ

karnataka

ಕೊರೊನಾ‌ ಭೀತಿ ಹಿನ್ನೆಲೆ ರಾಮನಗರದಲ್ಲಿ ಎ ಗ್ರೇಡ್ ದೇವಾಲಯಗಳ‌ ತೆರವಿಗೆ ತಡೆ..

ಮಾರ್ಗಸೂಚಿಯಲ್ಲಿನ ನಿಬಂಧನೆಗಳನ್ನು ಪಾಲನೆ ಮಾಡುವಲ್ಲಿ ಯಾವುದೇ ರೀತಿಯ ಲೋಪದೋಷಗಳು ಕಂಡು ಬಂದಲ್ಲಿ ಸಂಬಂಧಿಸಿದ ದೇವಾಲಯದ ಸಮಿತಿ, ಟ್ರಸ್ಟಿನವರು, ಆಡಳಿತಾಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ, ಅರ್ಚಕರು ಇನ್ನಿತರೆ ದೇವಾಲಯದ ಸಿಬ್ಬಂದಿ ನೇರ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಕಾನೂನಿನ ರೀತಿಯ ಕ್ರಮ.

By

Published : Jun 9, 2020, 2:46 PM IST

Published : Jun 9, 2020, 2:46 PM IST

Ramnagar
ರಾಮನಗರ

ರಾಮನಗರ :ಸಾರ್ವಜನಿಕರ ಮತ್ತು ಭಕ್ತಾದಿಗಳ ಆರೋಗ್ಯ ಹಾಗೂ ಕಾನೂನು ಸುವ್ಯವಸ್ಥೆಯ ಹಿತದೃಷ್ಠಿಯಿಂದ ಕೋವಿಡ್-19 (ಕರೋನಾ ವೈರಾಣು ಕಾಯಿಲೆ-2019) ಹರಡುವುದನ್ನು ತಡೆಯುವ ಕುರಿತು ಮುಂಜಾಗ್ರತಾ ಕ್ರಮವಾಗಿ ಎ ಗ್ರೇಡ್ ದೇವಾಲಯಗಳ‌ ತೆರವಿಗೆ ತಡೆ ನೀಡಿ ಜಿಲ್ಲಾಧಿಕಾರಿ ಎಂ ಎಸ್ ಅರ್ಚನಾ ಆದೇಶಿಸಿದ್ದಾರೆ.

ಕೊರೊನಾ‌ ಭೀತಿ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ದಂಡ ಪ್ರಕ್ರಿಯಾ ಸಂಹಿತೆ 1973 ಕಲಂ 144 ರಡಿ ರಾಮನಗರ ಜಿಲ್ಲೆಯ ಎ-ವರ್ಗಕ್ಕೆ ಸೇರಿದ ಅಧಿಸೂಚಿತ ಧಾರ್ಮಿಕ ಸಂಸ್ಥೆಗಳಲ್ಲಿ ಸಾರ್ವಜನಿಕ ಭಕ್ತಾಧಿಗಳಿಗೆ ದೇವರ ದರ್ಶನ ಕಲ್ಪಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿ ಮುಂದಿನ ಆದೇಶದವರೆಗೆ ದೇವಾಲಯಗಳಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ.

ಎ ಗ್ರೇಡ್ ದೇವಾಲಯಗಳು :ರಾಮನಗರ ತಾಲೂಕಿನ ಅವ್ವೇರಹಳ್ಳಿಯ ಶ್ರೀ ರೇವಣಸಿದ್ದೇಶ್ವರ ದೇವಸ್ಥಾನ, ಚನ್ನಪಟ್ಟಣದ ವಂದಾರಗುಪ್ಪೆಯ ಶ್ರೀ ಕೆಂಗಲ್ ಆಂಜನೇಯ ದೇವಸ್ಥಾನ, ದೊಡ್ಡಮಳೂರಿನ ಶ್ರೀ ಅಪ್ರಮೇಯ ದೇವಸ್ಥಾನ, ಕನಕಪುರದ ಕಬ್ಬಾಳಿನ ಶ್ರೀ ಕಬ್ಬಾಳಮ್ಮ ದೇವಸ್ಥಾನ, ಕಲ್ಲಹಳ್ಳಿಯ ಶ್ರೀ ವೆಂಕಟರಮಣ ದೇವಸ್ಥಾನ, ಮಾಗಡಿಯ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಹಾಗೂ ಸಾವನದುರ್ಗದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯಗಳು ಎ ವರ್ಗದ ದೇವಸ್ಥಾನಗಳಾಗಿವೆ. ಈ ದೇವಾಲಯಗಳಲ್ಲಿ ಭಕ್ತಾಧಿಗಳಿಗೆ ದೇವರ ದರ್ಶನ ಕಲ್ಪಿಸುವುದನ್ನು ತಾತ್ಕಾಲಿಕ ನಿಷೇಧಿಸಲಾಗಿದೆ. ಉಳಿದಂತೆ ನಿತ್ಯ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ದೇವಾಲಯದ ಒಳ ಪ್ರಕಾರದಲ್ಲಿ ಯಥಾ ರೀತಿ ಮುಂದುವರೆಸಲು ಸೂಚಿಸಿದ್ದಾರೆ.

ರಾಮನಗರ ಜಿಲ್ಲಾ ವ್ಯಾಪ್ತಿಗೆ ಒಳಪಡುವ ಬಿ ಮತ್ತು ಸಿ ವರ್ಗಕ್ಕೆ ಸೇರಿದ ಅಧಿಸೂಚನೆ ಧಾರ್ಮಿಕ ಸಂಸ್ಥೆಗಳಿಗೆ ಹಾಗೂ ಖಾಸಗಿ ಧಾರ್ಮಿಕ ಸಂಸ್ಥೆಗಳು ಪೂಜಾ ಸ್ಥಳಗಳು ಆದ್ಯಾತ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕ, ಭಕ್ತಾಧಿಗಳಿಗೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಮಾರ್ಗಸೂಚಿಗಳನ್ವಯ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲು ಆದೇಶದಲ್ಲಿ ತಿಳಿಸಿದ್ದಾರೆ.

ಮಾರ್ಗಸೂಚಿಯಲ್ಲಿನ ನಿಬಂಧನೆಗಳನ್ನು ಪಾಲನೆ ಮಾಡುವಲ್ಲಿ ಯಾವುದೇ ರೀತಿಯ ಲೋಪದೋಷಗಳು ಕಂಡು ಬಂದಲ್ಲಿ ಸಂಬಂಧಿಸಿದ ದೇವಾಲಯದ ಸಮಿತಿ, ಟ್ರಸ್ಟಿನವರು, ಆಡಳಿತಾಧಿಕಾರಿ, ಕಾರ್ಯನಿರ್ವಾಹಕ ಅಧಿಕಾರಿ, ಅರ್ಚಕರು ಇನ್ನಿತರೆ ದೇವಾಲಯದ ಸಿಬ್ಬಂದಿ ನೇರ ಹೊಣೆಗಾರರನ್ನಾಗಿ ಮಾಡಿ ಅವರ ಮೇಲೆ ಕಾನೂನಿನ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟವಾಗಿ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details