ರಾಯಚೂರು: ಆ.5 ರಂದು ಅಯೋಧ್ಯೆಯ ರಾಮಮಂದಿರದ ಭೂಮಿ ಪೂಜೆ ಹಿನ್ನೆಲೆ ಕೋಮು ಗಲಭೆ ಉಂಟಾಗುವ ಮಾಹಿತಿ ಮೇರೆಗೆ ರೌಡಿ ಶೀಟರ್ಗಳಿಗೆ ಸಿಪಿಐ ಫಾಸಿಯುದ್ದಿನ್ ಎಚ್ಚರಿಕೆ ನೀಡಿದರು.
ರಾಮಮಂದಿರ ಭೂಮಿ ಪೂಜೆ ಹಿನ್ನೆಲೆ ರೌಡಿ ಶೀಟರ್ಗಳಿಗೆ ಎಚ್ಚರಿಕೆ - ಅಯೋಧ್ಯೆ ಭೂಮಿ ಪೂಜೆ
ರೌಡಿ ಶೀಟರ್ಗಳಿಂದ ಆ.5 ಅಯೋಧ್ಯೆ ಭೂಮಿ ಪೂಜೆ ದಿನ ಕೋಮು ಗಲಭೆ ಸೃಷ್ಟಿಸುವ ಮಾಹಿತಿ ಹಿನ್ನೆಲೆ ರಾಯಚೂರಿನ ಸದರ್ ಬಜಾರ್ ಹಾಗೂ ನೇತಾಜಿ ಪೊಲೀಸ್ ಠಾಣೆ ರೌಡಿ ಶೀಟರ್ಗಳಿಗೆ ಸಿಪಿಐ ಫಾಸಿಯುದ್ದಿನ್ ಖಡಕ್ ಎಚ್ಚರಿಕೆ ನೀಡಿದರು.
ರಾಯಚೂರಿನ ರೌಡಿ ಶೀಟರ್ಗಳಿಗೆ ಎಚ್ಚರಿಕೆ
ನಗರದ ಸದರ್ ಬಜಾರ್ನ ಠಾಣೆಯ 22 ರೌಡಿ ಶೀಟರ್ಗಳು ಹಾಗೂ ನೇತಾಜಿ ಪೊಲೀಸ್ ಠಾಣೆಯ 20 ರೌಡಿ ಶೀಟರ್ಗಳಿಗೆ ಠಾಣೆಗೆ ಕರೆಸಿ ಕಾನೂನು ನಿಯಮ ಉಲ್ಲಂಘಿಸದಂತೆ ಸೂಚಿಸಿದರು. ಕೋಮುಗಲಭೆ, ಗಲಾಟೆ ಹಾಗೂ ಪ್ರಚೋದಿಸುವ ಕೆಲಸಕ್ಕೆ ಮುಂದಾಗದಂತೆ ಎಚ್ಚರಿಕೆ ನೀಡಿದರು.
ಆ ದಿನ ರೌಡಿ ಶೀಟರ್ಗಳು ಮನೆಯಲ್ಲಿಯೇ ಇರಬೇಕು. ಹೊರಗಡೆ ಬರಬಾರದು. ನಿಯಮ ಮೀರಿ ಕಾಣಿಸಿಕೊಂಡಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.