ಕರ್ನಾಟಕ

karnataka

ETV Bharat / state

ರಾಯಚೂರು: ಶಂಕಿತ ವ್ಯಕ್ತಿಗಳ ತಪಾಸಣೆ ವೇಳೆ ಪೊಲೀಸ್​ ಸಿಬ್ಬಂದಿಗಳ ಮೇಲೆ ಮಾರಣಾಂತಿಕ ಹಲ್ಲೆ - ಹಲ್ಲೆ

ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಾಸ್ಪದ ವ್ಯಕ್ತಿಗಳನ್ನು ತಪಾಸಣೆ ನಡೆಸುವ ವೇಳೆ ಪೊಲೀಸ್​ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ. ಗಾಯಗೊಂಡಿರುವ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

attacked
ಪೊಲೀಸ್​ ಸಿಬ್ಬಂದಿಗಳಿಬ್ಬರ ಮೇಲೆ ಹಲ್ಲೆ

By ETV Bharat Karnataka Team

Published : Jan 9, 2024, 1:20 PM IST

Updated : Jan 9, 2024, 1:43 PM IST

ಶಂಕಿತ ವ್ಯಕ್ತಿಗಳ ತಪಾಸಣೆ ವೇಳೆ ಪೊಲೀಸ್​ ಸಿಬ್ಬಂದಿಗಳ ಮೇಲೆ ಗಂಭೀರ ಹಲ್ಲೆ

ರಾಯಚೂರು:ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಗಳ ತನಿಖೆ ವೇಳೆ ಜಿಲ್ಲೆಯ ಬಳಗಾನೂರು ಠಾಣೆಯ ಪೊಲೀಸರ ಮೇಲೆ ಹಲ್ಲೆ ನಡೆಸಿರುವ ಘಟನೆ ಮಸ್ಕಿ ಪಟ್ಟಣದಲ್ಲಿ ನಡೆದಿದೆ.

ಮಸ್ಕಿ ಪಟ್ಟಣದ ವಾಲ್ಮೀಕಿ ಸರ್ಕಲ್​ನಲ್ಲಿ ಸೋಮವಾರ ಸಂಜೆ ಈ ಪ್ರಕರಣ ನಡೆದಿದೆ. ಬಳಗಾನೂರ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳಾಗಿರುವ ಮಂಜುನಾಥ ಹಾಗೂ ಗೋಪಾಲ ಗಾಯಗೊಂಡವರು ಎಂದು ಹೇಳಲಾಗುತ್ತಿದ್ದೆ. ಇವರಿಗೆ ಮಸ್ಕಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಬಳಗಾನೂರು ಠಾಣೆ ವ್ಯಾಪ್ತಿಯಲ್ಲಿ ಸುಂಕನೂರು ಗ್ರಾಮದಲ್ಲಿದೆ ನಡೆದ ಕಳ್ಳತನ ಪ್ರಕರಣಕ್ಕೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಮಾರುವೇಷದಲ್ಲಿ ಬಂದಿದ್ದ ಇಬ್ಬರು ಪೊಲೀಸರು ಗುಡದೂರು ಹತ್ತಿರ ಅನುಮಾನಾಸ್ಪದವಾಗಿ ಬೈಕ್ ಮೇಲೆ ತೆರಳುತ್ತಿದ್ದ ಇಬ್ಬರ ಯವಕರನ್ನು ತಡೆದು ವಿಚಾರಣೆ ಮಾಡುವಾಗ, ಯುವಕರು ಪೊಲೀಸರನ್ನು ತಳ್ಳಿ ಮಸ್ಕಿ ಪಟ್ಟಣಕ್ಕೆ ಕಡೆ ಹೋಗಿದ್ದಾರೆ. ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದರಿಂದ ಸಂಶಯ ಬಂದು ಅವರನ್ನು ಬೆನ್ನಟ್ಟಿ ಬಂದಿದ್ದರು. ಈ ಸಂದರ್ಭ ಮಸ್ಕಿ ಪಟ್ಟಣದ ವಾಲ್ಮೀಕಿ ಸರ್ಕಲ್​ ಬಳಿಯ ಸಾರ್ವಜನಿಕ ಪ್ರದೇಶದಲ್ಲಿ ಪೊಲೀಸರ ಮೇಲೆ ಕಲ್ಲು, ಬಡಿಗೆ ಸೇರಿದಂತೆ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ.

ದಾಳಿಯಿಂದ ಗಾಬರಿಗೊಂಡ ಪೊಲೀಸರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಅವರನ್ನು ಬೆನ್ನಟ್ಟಿ ಹೋಗಿ ಹಲ್ಲೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಹೇಗೋ ರಸ್ತೆಯ ಆಸುಪಾಸಿನ ಅಂಗಡಿಯಲ್ಲಿ ಹೋಗಿ ಪೊಲೀಸರು ತಪ್ಪಿಸಿಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಬಳಗಾನೂರು ಪಿಎಸ್ಐ ದಾದಾವಲಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಪೊಲೀಸರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಬಳಗಾನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕಂಡ ಪಟ್ಟಣದಲ್ಲಿನ ನಾಗರೀಕರು ಬೆಚ್ಚಿಬಿದ್ದಿದ್ದು ಘಟನೆ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಕುರಿತಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಎಸ್ಪಿ ನಿಖಿಲ್.ಬಿ. ಈಟಿವಿ ಭಾರತ್​ದೂರವಾಣಿ ಮೂಲಕ ಸಂಪರ್ಕಿಸಿದಾಗ, ಕಳ್ಳತನ ಪ್ರಕರಣಕ್ಕೆ ಸಂಭವಿಸಿದಂತೆ ಬಳಗಾನೂರು ಪೊಲೀಸರು ತನಿಖೆ ನಡೆಸುತ್ತಿದ್ದರು. ಈ ಸಮಯದಲ್ಲಿ ಬಳಗಾನೂರ ಪೊಲೀಸ್ ಠಾಣೆಯ ಸಿಬ್ಬಂದಿಗಳ ಮತ್ತು ಅನುಮಾನಾಸ್ಪದ ವ್ಯಕ್ತಿಗಳ ನಡುವೆ ಜಟಪಾಟಿ ನಡೆದಿದೆ. ಅದರ ಭಾಗವಾಗಿ ಮುಂದೆ ಮಸ್ಕಿ ಪಟ್ಟಣಕ್ಕೆ ಹೋಗಿದ್ದ ವೇಳೆ ಅಲ್ಲಿ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಬಿಡುಗಡೆಗೊಳಿಸಲಾಗಿದೆ. ಈ ರೀತಿ ಕೃತ್ಯವೆಸಗಿದವರನ್ನು ಸೆರೆ ಹಿಡಿಯುವುದಕ್ಕೆ ಮೂರು ತಂಡಗಳನ್ನು ರಚನೆ ಮಾಡಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಬಳಗಾನೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಸೂಚನೆ ನೀಡಲಾಗಿದೆ. ಅದರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯ ಕಾರು ಸುತ್ತುವರಿದು ಅಸಭ್ಯ ವರ್ತನೆ: ಮಹಾದೇವಪುರದಲ್ಲಿ ಘಟನೆ

Last Updated : Jan 9, 2024, 1:43 PM IST

ABOUT THE AUTHOR

...view details