ರಾಯಚೂರು: ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ ಕೊರೊನಾ ವೈರಸ್ ಸಲುವಾಗಿ ನಿರ್ಮಿಸಿದ ಪಿಎಂ ಕೋರ್ಸ್ ನಿಧಿಗೆ ವೈಯಕ್ತಿಕವಾಗಿ 1 ಲಕ್ಷ ಸೇರಿ ಸಂಸದರ ನಿಧಿಯಿಂದ 1 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಪಿಎಂ ಕೇರ್ಸ್ ನಿಧಿಗೆ ಸಂಸದ ರಾಜಾ ಅಮರೇಶ್ವರ್ ದೇಣಿಗೆ - corona virus latest news
ಕೊರೊನಾ ವೈರಸ್ ವಿರುದ್ಧ ಇಡೀ ದೇಶವೆ ಹೋರಾಟಕ್ಕೆ ನಿಂತಿದೆ. ಸೋಂಕು ತಡೆ ಮತ್ತು ವೈದ್ಯಕೀಯ ಸೌಲಭ್ಯಕ್ಕಾಗಿ ಧನಸಹಾಯ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಮನವಿ ಮಾಡಿದ್ದರು. ರಾಯಚೂರು ಸಂಸದ ರಾಜಾ ಅಮರೇಶ್ವರ್ ಸಂಸದರ ನಿಧಿಯಿಂದ 1 ಕೋಟಿ ರೂಪಾಯಿ ಹಾಗೂ ವೈಯಕ್ತಿಕವಾಗಿ 1 ಲಕ್ಷ ರೂಪಾಯಿಯನ್ನು ಪ್ರಧಾನಮಂತ್ರಿ ನಿಧಿಗೆ ನೀಡಿದ್ದಾರೆ.
ಪ್ರಧಾನ ಮಂತ್ರಿ ನಿಧಿಗೆ ವೈಯಕ್ತಿಕವಾಗಿ 1 ಲಕ್ಷ ನೀಡಿದ ಸಂಸದ ರಾಜಾ ಅಮರೇಶ್ವರ್
ಈ ವೇಳೆ ಮಾತನಾಡಿದ ಸಂಸದ, ಕೇಂದ್ರ ಸರ್ಕಾರ ವೈರಸ್ ತಡೆಗಟ್ಟುವಿಕೆಗೆ ಸಾಕಷ್ಟು ಶ್ರಮಿಸುತ್ತಿದೆ. ಎಲ್ಲರೂ ಕೈಲಾದ ಧನಸಹಾಯ ಮಾಡಬೇಕು ಎಂದು ಮನವಿ ಮಾಡಿದರು.