ರಾಯಚೂರು :ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ರಾಯಚೂರು ಸಂವಿಧಾನ ಹಕ್ಕುಗಳ ನಾಗರಿಕರ ವೇದಿಕೆ ಸಂಸದರ ಕಚೇರಿ ಎದುರಿನ ಟಿಪ್ಪುಸುಲ್ತಾನ್ ಗಾರ್ಡನ್‌ನಲ್ಲಿ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದೆ.
ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ನಂತರ ಹೋರಾಟಕ್ಕೆ ವೇದಿಕೆ ನಿರ್ಮಿಸಿಕೊಂಡು ಧರಣಿ ಆರಂಭಿಸಲಾಯ್ತು.
ಸಿಎಎ, ಎನ್ಆರ್ಸಿ ವಿರೋಧಿಸಿ ಮುಂದುವರೆದ ಹೋರಾಟ ಹೋರಾಟವನ್ನು ವಿನೂತನವಾಗಿ ನಡೆಸಲು ತೀರ್ಮಾನಿಸಿ ಸಿಎಎ, ಎರ್ಆರ್ಸಿಯಿಂದ ತೀವ್ರ ಸಮಸ್ಯೆಗೆ ಗುರಿಯಾಗುವ ಸಮುದಾಯವನ್ನು ಗುರುತಿಸಿ ಅವರಿಗೆ ಹೋರಾಟದಲ್ಲಿ ಮುಂಚೂಣಿ ಸ್ಥಾನ ನೀಡಲಾಗಿದೆ. ಪ್ರಮುಖವಾಗಿ ಪೌರ ಕಾರ್ಮಿಕರು, ಅಲೆಮಾರಿ ಜನಾಂಗ, ಅನಾಥರು, ಭಿಕ್ಷುಕರು, ರೈತರು, ದೇವದಾಸಿಯರು ಸೇರಿದಂತೆ ಇತರೆ ಸಮುದಾಯಗಳನ್ನು ಗುರುತಿಸಿ ಅವರಿಂದ ಪಂಜು ಹಚ್ಚುವ ಮೂಲಕ ಧರಣಿಗೆ ಚಾಲನೆ ನೀಡಲಾಯಿತು.
ಕೇಂದ್ರ ಸರ್ಕಾರ ವಿವಾದಾತ್ಮಕ ಕಾಯ್ದೆ ಜಾರಿ ಮಾಡುವ ಮೂಲಕ ದೇಶವನ್ನು ಹಾಳು ಮಾಡಲು ಹೊರಟಿದೆ. ಹಾಗಾಗಿ ಕೂಡಲೇ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು. ದೇಶದ ನಾಗರಿಕರನ್ನು ಧರ್ಮದ ಆಧಾರದ ಮೇಲೆ ವಿಂಗಡಿಸುವ ಮೂಲಕ ಮೋದಿ, ಅಮಿತ್ ಷಾ ಸರ್ಕಾರ ಪ್ಯಾಸಿಸ್ಟ್ ದಾಳಿ ನಡೆಸಲು ಮುಂದಾಗಿದೆ ಎಂಬ ಆಕ್ರೋಶ ಈ ವೇಳೆ ಕೇಳಿಬಂತು.