ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆಗೂ ಮುನ್ನವೇ ಚುನಾವಣಾ ಪ್ರಚಾರ ಜೋರಾಗಿದೆ. ಈ ನಡುವೆ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಕಬಡ್ಡಿ ಆಡುವ ಮೂಲಕ ಯುವ ಸಮುದಾಯವನ್ನು ಸೆಳೆಯಲು ಮುಂದಾಗಿದ್ದಾರೆ.
ಉಪ ಕದನಕ್ಕೂ ಮುನ್ನ ಅಖಾಡಕ್ಕಿಳಿದ ಮಾಜಿ ಶಾಸಕ..ಕಬಡ್ಡಿ ಕಬಡ್ಡಿ ಎಂದು ತೊಡೆ ತಟ್ಟಿದ ಪ್ರತಾಪಗೌಡ - prathap gowda patil played kabadi
ಬಳಗಾನೂರು ಗ್ರಾಮದಲ್ಲಿ ದೈಹಿಕ ಶಿಕ್ಷಕ ಮಹಾದೇವಪ್ಪರ ಸ್ಮರಣಾರ್ಥವಾಗಿ ಹೊನಲು ಬೆಳಕಿನಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯನ್ನು ಉದ್ಘಾಟಿಸಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಕಬಡ್ಡಿ ಮೈದಾನಕ್ಕಿಳಿದು ಯುವಕರಂತೆ ಕಬಡ್ಡಿ ಆಟವಾಡುವ ಮೂಲಕ ಯುವಕರ ಗಮನ ಸೆಳೆದರು.
ಜಿಲ್ಲೆಯ ಮಸ್ಕಿ ತಾಲೂಕಿನ ಬಳಗಾನೂರು ಗ್ರಾಮದಲ್ಲಿ ದೈಹಿಕ ಶಿಕ್ಷಕ ಮಹಾದೇವಪ್ಪರ ಸ್ಮರಣಾರ್ಥ ಹೊನಲು ಬೆಳಕಿನಲ್ಲಿ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ಪಂದ್ಯಾವಳಿಯನ್ನು ಉದ್ಘಾಟಿಸಿದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಕಬಡ್ಡಿ ಮೈದಾನಕ್ಕಿಳಿದು ಯುವಕರಂತೆ ಕಬಡ್ಡಿ ಆಡುವ ಮೂಲಕ ಎಲ್ಲರ ಗಮನ ಸೆಳೆದರು.
ಮಸ್ಕಿ ಉಪಚುನಾವಣೆಗೆ ದಿನಾಂಕ ಘೋಷಣೆಯಾಗುವ ಮುನ್ನವೇ ರಾಷ್ಟ್ರೀಯ ಪಕ್ಷಗಳೆರಡು ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಭಾರಿ ರಣತಂತ್ರ ರೂಪಿಸುತ್ತಿವೆ. ಪ್ರತಾಪಗೌಡ ಪಾಟೀಲ್ ಕಬಡ್ಡಿ ಆಟಕ್ಕೂ ಸೈ, ಎಲೆಕ್ಷನ್ಗೂ ಸೈ ಎನ್ನುವ ಸಂದೇಶ ಸಾರುವ ಜೊತೆಗೆ ಯುವಕರ ಮತಗಳನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ.