ಬೆಂಗಳೂರು: ರಾಯಚೂರು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಬೆರಳಚ್ಚುಗಾರ, ಜವಾನ ಸೇರಿದಂತೆ ಒಟ್ಟು 26 ಹುದ್ದೆಗಳ ಭರ್ತಿ ನಡೆಯಲಿದೆ.
ಹುದ್ದೆಗಳು ಯಾವುವು?:
- ಸ್ಟೆನೋಗ್ರಾಫರ್ ಗ್ರೇಡ್ 3 - 1
- ಟೈಪಿಸ್ಟ್ - 8
- ಟೈಪಿಸ್ಟ್- ಕಾಪಿಸ್ಟ್ - 1
- ಪ್ರೊಸೆಸ್ ಸರ್ವರ್ - 5
- ಜವಾನ - 10
- ಚಾಲಕ - 1
ವಿದ್ಯಾರ್ಹತೆ: ಜವಾನ, ಚಾಲಕ ಹೊರತಾಗಿ ಉಳಿದ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ಪೂರ್ಣಗೊಳಿಸಿರಬೇಕು. ಕರ್ನಾಟಕ ಪ್ರೌಢ ಪರೀಕ್ಷಾ ಮಂಡಳಿ ನಡೆಸುವ ಕನ್ನಡ ಮತ್ತು ಆಂಗ್ಲ ಪರೀಕ್ಷೆಯಲ್ಲಿ ಟೈಪಿಂಗ್ ಮತ್ತು ಶೀಘ್ರ ಲಿಪಿಗಾರ ಪರೀಕ್ಷೆಯಲ್ಲಿ ಸೀನಿಯರ್ ಪರೀಕ್ಷೆ ಉತ್ತೀರ್ಣರಾಗಿರಬೇಕು. ಜವಾನ ಮತ್ತು ಚಾಲಕರ ಹುದ್ದೆಗೆ 10ನೇ ಪರೀಕ್ಷೆ ಉತ್ತೀರ್ಣರಾಗಿರಬೇಕು.
ವಯೋಮಿತಿ: ಅಭ್ಯರ್ಥಿಗಳು ಕನಿಷ್ಟ 18ರಿಂದ ಗರಿಷ್ಠ 35 ವರ್ಷ ವಯೋಮಿತಿ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು 3 ವರ್ಷ ವಯೋಮಿತಿ ಸಡಿಲಿಕೆ ಇದೆ.