ರಾಯಚೂರು:ಕೊರೊನಾ ನಿಯಂತ್ರಿಸುವ ಸಲುವಾಗಿ ಒಂದು ವಾರ ಲಾಕ್‌ಡೌನ್ ಮಾಡಲಾಗಿದ್ದು,ಜಿಟಿಜಿಟಿ ಮಳೆಯ ನಡುವೆಯೇ ನಗರದಲ್ಲಿ ಅನವಶ್ಯಕ ಓಡಾಡುತ್ತಿರುವ ಕಾರುಗಳನ್ನು ಪಶ್ಚಿಮ ಠಾಣೆ ಪೊಲೀಸರು ವಶಕ್ಕೆ ಪಡೆದು ಅವುಗಳ ಮಾಲೀಕರಿಗೆ ದಂಡ ವಿಧಿಸುತ್ತಿದ್ದಾರೆ.
ಕಾರು ಮಾಲೀಕರಿಗೆ ಬಿಸಿ ಮುಟ್ಟಿಸುತ್ತಿರುವ ರಾಯಚೂರು ಪೊಲೀಸರು - Raichur district news
ಜಿಟಿಜಿಟಿ ಮಳೆಯ ನಡುವೆಯೇ ನಗರದಲ್ಲಿ ಅನವಶ್ಯಕ ಸಂಚರಿಸುವ ಕಾರುಗಳನ್ನು ಪಶ್ಚಿಮ ಠಾಣೆ ಪೊಲೀಸರು ವಶಕ್ಕೆ ಪಡೆದು, ಅವುಗಳ ಮಾಲೀಕರಿಗೆ ದಂಡ ವಿಧಿಸುತ್ತಿದ್ದಾರೆ.
ತಪಾಸಣೆ ನಡೆಸುತ್ತಿರುವ ಪೊಲೀಸರು
ಪಿಎಸ್‌ಐ ದಾದಾವಲಿ ನೇತೃತ್ವದಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಂಚರಿಸುತ್ತಿರುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ಸಿಂಧನೂರು ನಗರದಲ್ಲೂ ಲಾಕ್‌ಡೌನ್ ಜಾರಿಯಾಗಿದ್ದು, ಬೇಕಾಬಿಟ್ಟಿ ಓಡಾಡುತ್ತಿರುವ ವಾಹನ ಸವಾರರಿಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಲಾಗುತ್ತಿದೆ. ಈ ಎರಡೂ ನಗರಗಳಲ್ಲಿ ತರಕಾರಿ, ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲವನ್ನೂ ಬಂದ್ ಮಾಡಲಾಗಿದೆ.