ರಾಯಚೂರು: ಟ್ರ್ಯಾಕ್ಟರ್ಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸ್ವಾನ್ನಪ್ಪಿದ್ದರೆ, ನಾಲ್ವರು ಗಾಯಗೊಂಡಿರುವ ಘಟನೆ ಜಿಲ್ಲೆಯ ಗೊಲಪಲ್ಲಿ ಬಳಿ ಸಂಭವಿಸಿದೆ.
ಲಿಂಗಸೂಗೂರು ತಾಲೂಕಿನ ಗುರುಗುಂಟಾ ಗ್ರಾಮದ ಬಳಿ ಬರುವ ರಾಯದುರ್ಗ ಗ್ರಾಮದ ನಿವಾಸಿ ದುರುಗುಪ್ಪ(35) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ರಾಯದುರ್ಗ ಗ್ರಾಮದಿಂದ ಅಲ್ಲಳ್ಳಿ ಗ್ರಾಮಕ್ಕೆ ಮೇವು ತೆಗೆದುಕೊಂಡು ಬರಲು ಟ್ರಾಕ್ಟರ್ನಲ್ಲಿ ಐವರು ತೆರಳುತ್ತಿದ್ದರು. ಮಾರ್ಗ ಮಧ್ಯೆ ಗೊಲಪಲ್ಲಿ ಬ್ರಿಡ್ಜ್ ಬಳಿ ಲಾರಿ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ ಟ್ರ್ಯಾಕ್ಟರ್ನಲ್ಲಿದ್ದ ದುರುಗಪ್ಪ ಮೃತಪಟ್ಟಿದ್ದಾರೆ. ಇನ್ನುಳಿದ ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.