ಕರ್ನಾಟಕ

karnataka

ETV Bharat / state

Mysore Gangrape Case: ಗಂಧದ ಮರ ಕದಿಯಲು ಹೋಗಿ ವಿದ್ಯಾರ್ಥಿನಿ ಮೇಲೆ ಎರಗಿದ್ದ ಕಾಮುಕರು - ಮೈಸೂರು ಅಪರಾಧ ಸುದ್ದಿ

ಗ್ಯಾಂಗ್ ರೇಪ್(Gangrape) ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಆರೋಪಿಗಳು ಲಲಿತಾದ್ರಿಪುರದ ಪ್ರದೇಶದಲ್ಲಿ ಗಂಧದ ಮರ ಕದಿಯಲು ಬಂದ ವೇಳೆ ಈ ಅತ್ಯಾಚಾರ ನಡೆಸಿರುವುದಾಗಿ ಬಾಯ್ಬಿಟ್ಟಿದ್ದಾರೆ.

ಅತ್ಯಾಚಾರ ಪ್ರಕರಣ: ಗಂಧದ ಮರ ಕದಿಯಲೋದಾಗ ಈ ಕೃತ್ಯ ಎಸಗಿದರಂತೆ
ಸ್ಥಳ ಮಹಜರು

By

Published : Aug 31, 2021, 1:13 PM IST

Updated : Aug 31, 2021, 1:41 PM IST

ಮೈಸೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿಚಾರಣೆ ವೇಳೆ ಅಚ್ಚರಿ ಮಾಹಿತಿಗಳು ಹೊರಬರುತ್ತಿವೆ. ಸಾಮೂಹಿಕ ಅತ್ಯಾಚಾರ(Gangrape) ಗ್ಯಾಂಗ್ ರೇಪ್ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.

ಆ. 24 ರಂದು ಸಂಜೆ ಆರೋಪಿಗಳು ಲಲಿತಾದ್ರಿಪುರದ ಪ್ರದೇಶದಲ್ಲಿ ಗಂಧದ ಮರ ಕದಿಯಲು ಬಂದ ವೇಳೆ ಏಕಾಂತದಲ್ಲಿದ್ದ ಎಂಬಿಎ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತನ ಮೇಲೆ ಮುಗಿಬಿದ್ದಿದ್ದರು. ಈ ವೇಳೆ ಯುವಕ ಮೇಲೆ ಹಲ್ಲೆ ನಡೆಸಿ, ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವುದಾಗಿ ಹೇಳಿದ್ದಾರೆ.

ಸ್ಥಳ ಮಹಜರು

ಲಲಿತಾದ್ರಿಪುರದ ನಿರ್ಜನ ಪ್ರದೇಶದ ಘಟನಾ ಸ್ಥಳಕ್ಕೆ ಗೂಡ್ಸ್ ಆಟೋದಲ್ಲಿ ಆರೋಪಿಗಳು ತೆರಳಿದ್ದು, ಗಂಧದ ಮರ ಸಿಗದ ಕಾರಣ ಅಲ್ಲೇ ಕುಳಿತು ಎಣ್ಣೆ ಪಾರ್ಟಿ ಮಾಡುತ್ತಿದ್ದರಂತೆ. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಯುವಕ ಹಾಗೂ ಯುವತಿಯ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿ, ಅತ್ಯಾಚಾರ ನಡೆಸಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ವಿಚಾರಣೆ ವೇಳೆ ಪೊಲೀಸರಿಗೆ ಆರೋಪಿಗಳು ತಿಳಿಸಿದ್ದಾರೆ.

ಸ್ಥಳ ಮಹಜರು

ಘಟನೆ ಬಳಿಕ ವಿದ್ಯಾರ್ಥಿನಿ ಹಾಗೂ ಯುವಕ ಇಬ್ಬರೂ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಸಂತ್ರಸ್ತೆ ಮುಂಬೈಗೆ ತೆರಳಿದ್ದಾಳೆ.

Last Updated : Aug 31, 2021, 1:41 PM IST

ABOUT THE AUTHOR

...view details