ರಾಯಚೂರು: ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ 10 ಅಭ್ಯರ್ಥಿಗಳಿಂದ ಸಲ್ಲಿಕೆಯಾಗಿರುವ 13 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಏ.17ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಮಾ.30 ಕೊನೆಯ ದಿನವಾಗಿತ್ತು. ಮಾ. 31ರಂದು ಸಲ್ಲಿಕೆಯಾದ ನಾಮಪತ್ರಗಳ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಸಲ್ಲಿಕೆಯಾಗಿರುವ 13 ನಾಮಪತ್ರಗಳು ಕ್ರಮಬದ್ಧವಾಗಿವೆ.
ಇದನ್ನೂ ಓದಿ: 'ಇನ್ಮುಂದೆ ಕ್ಷೇತ್ರದಲ್ಲಿ ನಿನ್ನ ಆಟ, ಗೂಂಡಾಗಿರಿ, ಬೆದರಿಕೆಗಳು ನಡೆಯಲ್ಲ'
ಬಿಜೆಪಿಯ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್, ಕಾಂಗ್ರೆಸ್ನ ಅಭ್ಯರ್ಥಿ ಬಸನಗೌಡ ತುರುವಿಹಾಳ, ಕರ್ನಾಟಕ ರಾಷ್ಟ್ರ ಸಮಿತಿಯ ಅಭ್ಯರ್ಥಿ ಓಬಳೇಶಪ್ಪ ಬಿ.ಟಿ. ಹಾಗೂ ಪಕ್ಷೇತರ ಅಭ್ಯರ್ಥಿಗಳಾದ ಅಮರೇಶ, ಈಶಪ್ಪ, ಚಕ್ರವರ್ತಿ ನಾಯಕ.ಟಿ, ದೀಪಿಕಾ .ಎಸ್, ಬಸನಗೌಡ, ಶ್ರೀನಿವಾಸ ನಾಯಕ ಮತ್ತು ಸಿದ್ದಲಿಂಗಪ್ಪ ಇವರ ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾಧಿಕಾರಿ ರಾಜಶೇಖರ ಡಂಬಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.