ರಾಯಚೂರು: ಜಿಲ್ಲೆಯಾದ್ಯಂತ ಜುಲೈ 12 ರಿಂದ 14ನೇ ತಾರೀಖಿನವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ 24 ಗಂಟೆಗಳ ಕಾಲ ನಿಗಾ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಜುಲೈ 12 ರಿಂದ 14ರ ವರೆಗೆ ರಾಯಚೂರಿನಲ್ಲಿ ಭಾರೀ ಮಳೆ: ಅಗತ್ಯ ಕ್ರಮಕ್ಕೆ ಜಿಲ್ಲಾಡಳಿತ ಸೂಚನೆ - Heavy rains in Raichur from 12 to 14 rd
ರಾಜ್ಯದಲ್ಲಿ ಮುಂಗಾರು ಮಳೆ ಜೂ.9 ರಿಂದ 15 ರವರೆಗೆ ಅಬ್ಬರಿಸಲಿದೆ. ರಾಯಚೂರಿನಲ್ಲಿ 12ನೇ ತಾರೀಖಿನಿಂದ 14 ರವರೆಗೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಂದಾಯ ಇಲಾಖೆ, ಗ್ರಾಮ ಪಂಚಾಯತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ನೌಕರರು ಕೇಂದ್ರ ಸ್ಥಾನವನ್ನು ಬಿಡದೆ 24 ಗಂಟೆಗಳ ಕಾಲ ಟೋಲ್ ರೂಂ ಸ್ಥಾಪಿಸಿ ನಿಗಾ ವಹಿಸುವಂತೆ ತಿಳಿಸಲಾಗಿದೆ. ಜೊತೆಗೆ ಚರಂಡಿ ಸ್ವಚ್ಛಗೊಳಿಸಿ, ತಗ್ಗು ಪ್ರದೇಶಗಳು ಮತ್ತು ಮುಳುಗಡೆ ಪ್ರದೇಶಗಳಲ್ಲಿ ಅಗತ್ಯ ರಕ್ಷಣಾ ಕ್ರಮಗಳನ್ನು ಕೈಗೊಂಡು ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿಗೆ ಮಾಹಿತಿ ಒದಗಿಸುವಂತೆಯೂ ಸೂಚಿಸಲಾಗಿದೆ.
ಇನ್ನು ಸೇತುವೆಗಳು ಮುಳಗಡೆಯಾಗುವ ಸ್ಥಳದಲ್ಲಿ ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳುವಂತೆ ತಿಳಿಸಿದೆ. ಅಗ್ನಿಶಾಮಕ ದಳ, ಎನ್ ಡಿಆರ್ಎಫ್ ತಂಡಗಳನ್ನ ಸಿದ್ಧತೆ ಮಾಡಿಕೊಳ್ಳುವುದು ಸೇರಿದಂತೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವ ಮೂಲಕ ಮುನ್ನೆಚ್ಚರಿಕೆ ವಹಿಸುವಂತೆ ಆಯಾ ಇಲಾಖೆಗಳಿಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.