ರಾಯಚೂರು/ನಾರಾಯಣಪೇಟ:ತೆಲಂಗಾಣದ ನಾರಾಯಣಪೇಟ ಜಿಲ್ಲೆಯಲ್ಲಿ ಹರಿಯುತ್ತಿರುವಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿಬಿದ್ದು, ರಾಯಚೂರು ತಾಲೂಕಿನ ನಾಲ್ವರ ಕಾಣೆಯಾಗಿದ್ದಾರೆ.
ರಾಯಚೂರು ನಿವಾಸಿಗಳು ನೀರುಪಾಲು!
ನಾಪತ್ತೆಯಾದವರನ್ನು ರಾಯಚೂರು ತಾಲೂಕಿನ ನಡುಗಡ್ಡೆ ಪ್ರದೇಶದ ಕುರ್ವಕಲಾ ನಿವಾಸಿಗಳೆಂದು ಹೇಳಲಾಗುತ್ತಿದೆ. ಒಂದೇ ಕುಟುಂಬದ ತಾಯಿ ಸುಮಲತಾ(35), ಮಗಳು ರೋಜಾ(6), ನರಸಮ್ಮ ರಾಮುಲು(45), ನರಸಮ್ಮ ನರಸಪ್ಪ(55) ಕಣ್ಮರೆಯಾದವರು.
ತಾಯಿ-ಮಗು ಸೇರಿ ನಾಲ್ವರು ಮಹಿಳೆಯರು ನೀರುಪಾಲು..
ನಾರಾಯಣಪೇಟ ಜಿಲ್ಲೆಯ ಪಂಚಾದಿಪಾಡಕ್ಕೆ ನಿತ್ಯ ಬಳಕೆ ವಸ್ತುಗಳ ಖರೀದಿಗೆ ತೆಪ್ಪದಲ್ಲಿ ಹೋಗಿದ್ರು. ತಮಗೆ ಬೇಕಾದ ವಸ್ತುಗಳನ್ನ ಖರೀದಿಸಿ ತೆಪ್ಪದಲ್ಲಿ 13 ಜನ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಈ ವೇಳೆ 9 ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ 6 ವರ್ಷದ ಬಾಲಕಿ ಸೇರಿ ನಾಲ್ವರು ಮಹಿಳೆಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ತಾಯಿ ಮತ್ತು ಮಗಳು ಸೇರಿ ರಾಜ್ಯದ ನಾಲ್ವರು ನಾಪತ್ತೆ ಕೃಷ್ಣಾ ನದಿಗೆ ಬಿಡಲಾಗಿದೆ 2.77 ಲಕ್ಷ ಕ್ಯೂಸೆಕ್ ನೀರು...
ಇನ್ನು ಸುದ್ದಿ ತಿಳಿದ ಯಾಪಲದಿನ್ನಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ನಾಲ್ವರನ್ನು ಪತ್ತೆ ಹಚ್ಚುವ ಕಾರ್ಯ ನಡೆದಿದೆ. ಕೃಷ್ಣಾ ನದಿಗೆ 2.77 ಲಕ್ಷ ಕ್ಯೂಸೆಕ್ ನೀರು ಬಿಡಲಾಗಿದ್ದು, ಪ್ರವಾಹ ಭೀತಿ ಉಂಟಾಗಿದೆ.
ಈಜಿ ದಡ ಸೇರಿದ ಮಹಿಳೆ...
ತೆಪ್ಪ ಮುಳುಗುತ್ತಿದ್ದಂತೆ ಕೃಷ್ಣಾ ನದಿಯನ್ನು ಮಹಿಳೆಯೋರ್ವಳು ಈಜಿ ತನ್ನ ಪ್ರಾಣವನ್ನು ಉಳಿಸಿಕೊಂಡಿದ್ದಾಳೆ.
ಎನ್ಡಿಆರ್ಎಫ್ ಸಹಾಯಕ್ಕೆ ಕ್ರಮ...
ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಕಾರ್ಯಾಚರಣೆ ನಡೆಸುವುದು ಪೊಲೀಸರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಎನ್ಡಿಆರ್ಎಫ್ ಸಹಾಯಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಅಧಿಕಾರಿ ಹೇಳಿದ್ದೇನು...?
ನಿತ್ಯ ಬಳಕೆಯ ವಸ್ತುಗಳನ್ನು ತೆಗೆದುಕೊಂಡು 13 ಜನ ನಾರಾಯಣಪೇಟ ಜಿಲ್ಲೆಯ ಮಕ್ತಲ್ ತಾಲೂಕಿನ ಪಸಪುಲದಿಂದ ಕರ್ನಾಟಕದ ರಾಯಚೂರು ಜಿಲ್ಲೆಯ ಕುರ್ವಕಲಾ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ತೆಪ್ಪ ಮಗುಚಿ ಬಿದ್ದಿದೆ. ಈ ಅವಘಡದಲ್ಲಿ ಮಹಿಳೆ ಸೇರಿದಂತೆ 9 ಜನ ಈಜಿ ದಡ ಸೇರಿದ್ದಾರೆ. ಆದ್ರೆ 6 ವರ್ಷದ ಬಾಲಕಿ ರೋಜಾ ಮತ್ತು ಆಕೆಯ ತಾಯಿ ಸೇರಿದಂತೆ ನಾಲ್ವರು ಮಹಿಳೆಯರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಸುದ್ದಿ ತಿಳಿದ ತಕ್ಷಣ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಶೋಧ ಕಾರ್ಯ ಕೈಗೊಂಡಿದ್ದಾರೆ ಎಂದು ನಾರಾಯಣ ಪೇಟ ಆರ್ಟಿಓ ಅಧಿಕಾರಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.