ಕರ್ನಾಟಕ

karnataka

ETV Bharat / state

ಕಾಲುವೆ ನಿರ್ಮಾಣಕ್ಕೆ ಜಮೀನು ನೀಡಿದ ರೈತ... ಸರ್ಕಾರದಿಂದ ಇನ್ನೂ ಸಿಗದ ಪರಿಹಾರ ಹಣ

ಕಾಲುವೆ ವಿಸ್ತರಣೆ ಮಾಡುವುದಕ್ಕಾಗಿ ಕೃಷ್ಣ ಭಾಗ್ಯ ಜಲ ನಿಗಮದ ಮೂಲಕ ನೂರಾರು ಎಕರೆ ಭೂಮಿಯನ್ನ ಸರ್ಕಾರ ರೈತರಿಂದ ವಶಪಡಿಸಿಕೊಂಡಿತ್ತು. ನಾಲೆ ನಿರ್ಮಾಣವಾಗುತ್ತದೆ ಎಂದು ರೈತರು ಸಹ ತಮ್ಮ ಜಮೀನು ನೀಡಿದ್ರು. ಆದ್ರೆ ಸರ್ಕಾರ ನೀಡಬೇಕಾದ ಭೂ ಪರಿಹಾರವನ್ನು ನೀಡಿಲ್ಲ ಎನ್ನಲಾಗಿದೆ.

By

Published : May 1, 2019, 12:29 PM IST

ನಾರಾಯಣಪುರ ಬಲದಂಡೆ ಕಾಲುವೆ

ರಾಯಚೂರು: ನಾರಾಯಣಪುರ ಬಲದಂಡೆ ಕಾಲುವೆ ವಿಸ್ತರಣೆ ಮಾಡುವುದಕ್ಕಾಗಿ ಕೃಷ್ಣ ಭಾಗ್ಯ ಜಲ ನಿಗಮದ ಮೂಲಕ ನೂರಾರು ಎಕರೆ ಭೂಮಿಯನ್ನ ಸರ್ಕಾರ ರೈತರಿಂದ ವಶಪಡಿಸಿಕೊಂಡಿತ್ತು. ನಾಲೆ ನಿರ್ಮಾಣವಾಗುತ್ತದೆ ಎಂದು ರೈತರು ಸಹ ತಮ್ಮ ಜಮೀನು ನೀಡಿದ್ರು. ಆದ್ರೆ ಸರ್ಕಾರ ನೀಡಬೇಕಾದ ಭೂ ಪರಿಹಾರವನ್ನು ನೀಡಿಲ್ಲ. ಇನ್ನು ಭೂ ಪರಿಹಾರ ನೀಡಲು ಅಧಿಕಾರಿಗಳು ಪರ್ಸೆಂಟೇಜ್ ಕೇಳುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿದೆ ಬಂದಿದೆ.

ಕಳೆದ ಐದು ವರ್ಷಗಳ ಹಿಂದೆ ಎನ್ಆರ್​​​ಬಿಸಿ ಕಾಲುವೆ ವಿಸ್ತರಣೆ ಮಾಡುವ ಉದ್ದೇಶದಿಂದ ರಾಯಚೂರು ತಾಲೂಕಿನ ನಾನಾ ಗ್ರಾಮಗಳಲ್ಲಿ ಸುಮಾರು 300 ಎಕರೆ ಜಮೀನನ್ನು ರೈತರಿಂದ ವಿಶೇಷ ಭೂ ಸ್ವಾಧೀನಾಧಿಕಾರಿಗಳು ವಶಪಡಿಸಿಕೊಂಡು ಕಾಲುವೆ ನಿರ್ಮಾಣ ಮಾಡಿದ್ರು. ಆದ್ರೆ ಭೂಮಿಯನ್ನ ನೀಡಿದ ರೈತರಿಗೆ ನೀಡಬೇಕಾದ ಭೂ ಪರಿಹಾರ ನೀಡದೆ ಅಧಿಕಾರಿಗಳು ಪರ್ಸೆಂಟೇಜ್ ಕೇಳುತ್ತಿದ್ದಾರೆ ಎಂದು ಅನ್ನದಾತರು ಆರೋಪಿಸುತ್ತಿದ್ದಾರೆ.

ನಾರಾಯಣಪುರ ಬಲದಂಡೆ ಕಾಲುವೆ

ರಾಯಚೂರು ತಾಲೂಕಿನ ಕಲಮಲ ಗ್ರಾಮದಲ್ಲಿ ಸುಮಾರು-70 ಎಕರೆ, ಹುಣಿಸಿಹಾಳ ಹುಡಾ-30 , ಅಸ್ಕಿಹಾಳ-40, ಯಕ್ಲಾಸಪೂರು-38, ರಾಂಪೂರ-42, ಗೋನಾಳ-40 ಸೇರಿದಂತೆ ಸುಮಾರು 300 ಎಕರೆ ಜಮೀನನ್ನು ಕೃಷ್ಣ ಮೇಲ್ದಂಡೆ ಯೋಜನೆಯಡಿಯಲ್ಲಿ ನೂರಾರು ರೈತರಿಂದ 2014ರಲ್ಲಿ ಭೂ ಸ್ವಾಧೀನ ಪಡಿಸಿಕೊಂಡು, ಕಾಲುವೆ ಕಾಮಗಾರಿಯನ್ನ ಮುಗಿಸಲಾಗಿದೆ. ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿದೆ. ಆದ್ರೆ ಭೂ ಪರಿಹಾರ ಮಾತ್ರ ನೀಡಿಲ್ಲ ಎನ್ನಲಾಗಿದೆ.

For All Latest Updates

TAGGED:

ABOUT THE AUTHOR

...view details