ಕರ್ನಾಟಕ

karnataka

ETV Bharat / state

ಸುತ್ತ ಹತ್ತೂರಿನಲ್ಲೂ ಬಲು ಫೇಮಸ್​ ಈ ಜೋಡಿಹಕ್ಕಿ.. ಏನೇಯಾದರೂ 'ನಾ ನಿನ್ನ‌ ಕೈಬಿಡಲಾರೆ..'

ಸಜ್ಜೆ ಹೂಬು ಕಣ್ಣಿಗೆ ಬಡಿದು ಅಮರಪ್ಪ ಅವರಿಗೆ ದೃಷ್ಟಿ ದೋಷಕ್ಕೆ ಕಾರಣವಾಯಿತು. ಅಂದಿನಿಂದ ಹೆಂಡತಿ ಹನುಮಂತಿ ಅವರ ಕೈ ಹಿಡಿದು ನಡೆಸುತ್ತ ಬಂದಿದ್ದಾರೆ. ಎಲ್ಲಿಯೇ ಹೋದರು ಇಬ್ಬರು ಒಟ್ಟಿಗೆ ಹೋಗುತ್ತಾರೆ..

By

Published : Aug 9, 2020, 6:04 PM IST

ಸುತ್ತ ಗ್ರಾಮಗಳಲ್ಲಿ ಬಲು ಫೇಮಸ್​ ಈ ಜೋಡಿಹಕ್ಕಿ
ಸುತ್ತ ಗ್ರಾಮಗಳಲ್ಲಿ ಬಲು ಫೇಮಸ್​ ಈ ಜೋಡಿಹಕ್ಕಿ

ಲಿಂಗಸೂಗೂರು: ತಾಲೂಕಿನ ಹಾಲಭಾವಿ ಗ್ರಾಮದಲ್ಲಿರುವ ವಯೋವೃದ್ಧರು ಕೈ-ಕೈ ಹಿಡಿದು ನಡೆದಾಡುವ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮೆಚ್ಚುಗೆ ಪಡೆದು ಜೋಡಿ ಹಕ್ಕಿಗಳೆಂದು ಗುರುತಿಸಿಕೊಂಡಿದ್ದಾರೆ.

ಸುತ್ತ ಗ್ರಾಮಗಳಲ್ಲಿ ಬಲು ಫೇಮಸ್​ ಈ ಜೋಡಿಹಕ್ಕಿ..

ಹಾಲಭಾವಿ ಗ್ರಾಮದ ಅಮರಪ್ಪ ಬಿಸೇನಿ (70), ಹನುಮಂತಿ ಬಿಸೇನಿ (65) ದಂಪತಿಗೆ ಎರಡು ಗಂಡು, ಮೂರು ಹೆಣ್ಣು ಮಕ್ಕಳು. ಕೃಷಿ ಕೆಲಸ ಮಾಡುವಾಗ ಸಜ್ಜೆ ಹೂಬು ಕಣ್ಣಿಗೆ ಬಡಿದು ಅಮರಪ್ಪ ಅವರಿಗೆ ದೃಷ್ಠಿ ದೋಷಕ್ಕೆ ಕಾರಣವಾಯಿತು. ಅಂದಿನಿಂದ ಹೆಂಡತಿ ಹನುಮಂತಿ ಅವರ ಕೈ ಹಿಡಿದು ನಡೆಸುತ್ತ ಬಂದಿದ್ದಾರೆ. ಎಲ್ಲಿಯೇ ಹೋದರು ಇಬ್ಬರು ಒಟ್ಟಿಗೆ ಹೋಗುತ್ತಾರೆ.

ಜೀವ ಇರುವವರೆಗೆ ಹೀಗೆ ಇರುತ್ತೇವೆ ಎಂದು ಹೇಳುತ್ತಾರೆ ಈ ಜೋಡಿ. ಈ ವಯೋವೃದ್ಧರ ಪ್ರೀತಿ, ಆತ್ಮೀಯತೆ, ಕಾಳಜಿ ಪ್ರಸ್ತುತ ಯುವ ಸಮಾಜಕ್ಕೆ ಮಾದರಿ ಆಗಿದೆ.

ABOUT THE AUTHOR

...view details