ರಾಯಚೂರು: ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈಲ್ವೆ ಕೇಳ ಸೇತುವೆ ಕೆಳಗೆ ಚರಂಡಿ ನೀರು ಭರ್ತಿಯಾಗಿದ್ದು, ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವ ಅನಿವಾರ್ಯತೆ ಎದುರಾಗಿದೆ.
ರೈಲ್ವೆ ಕೆಳ ಸೇತುವೆ ಕೆಳಗೆ ಚರಂಡಿ ನೀರು ನಿಂತು ಸಂಚಾರಕ್ಕೆ ಅಡ್ಡಿ
ರಾಯಚೂರು ಜಿಲ್ಲೆಯಲ್ಲಿ ರೈಲ್ವೆ ಕೆಳ ಸೇತುವೆ ಕೆಳಗೆ ಒಂದು ವಾರದಿಂದ ರಾಜಕಾಲುವೆ ನೀರು ನಿಂತು ಸಾರ್ವಜನಿಕರು ಪರದಾಡುತ್ತಿದ್ದಾರೆ.
ನಗರದ ಅರಬ್ ಮೊಹಲ್ಲಾ ಹಾಗೂ ಯಕಲ್ಲಾಸ್ ಪುರ ಸಂಪರ್ಕಿಸುವ ಏಕೈಕ ರೈಲ್ವೆ ಕೆಳ ಸೇತುವೆಯ ಕೆಳಗೆ ಒಂದು ವಾರದಿಂದ ಚರಂಡಿ ನೀರು ಸಂಗ್ರಹವಾಗುತ್ತಿದೆ. ಇದರ ನಡುವೆಯೇ ನಗರಸಭೆಯ ಘನ ತ್ಯಾಜ್ಯ ಸಂಗ್ರಹ ವಾಹನ ತ್ಯಾಜ್ಯ ಘಟಕಕ್ಕೆ ಸಂಚರಿಸುತ್ತಿದ್ದರೂ ಸಮಸ್ಯೆ ಸರಿಪಡಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿಲ್ಲ ಎನ್ನಲಾಗಿದೆ.
ಮಳೆ ಬಂದರೆ ಈ ಸೇತುವೆ ಕೆಳಗೆ ನೀರು ಸಂಗ್ರವಾಗುವುದು ಸಾಮಾನ್ಯ. ಆದರೆ ರಾಜಕಾಲುವೆಯಲ್ಲಿ ಕಸ ಸಂಗ್ರಹವಾಗಿರುವುದರಿಂದ ಚರಂಡಿ ನೀರು ಕೆಳ ಸೇತುವೆಯಲ್ಲಿ ಸಂಗ್ರಹವಾಗುತ್ತಿದ್ದು, ಅರಬ್ ಮೊಹಲ್ಲಾ ಹಾಗೂ ಯಕಲ್ಲಾಸ್ಪುರ ಸಂಪರ್ಕಿಸುವ ಏಕೈಕ ರಸ್ತೆ ಪಾದಚಾರಿಗಳು, ವಾಹನ ಸವಾರರು ಪರದಾಡುವಂತಾಗಿದೆ.