ರಾಯಚೂರು: ಜಿಲ್ಲೆಯಲ್ಲಿ ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಯಿಂದ ಕೃಷಿ ಆಧಾರಿತ ಹಾಗೂ ತೋಟಗಾರಿಕೆ ಬೆಳೆಗಳು ಸೇರಿದಂತೆ ಒಟ್ಟು 7,186 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ಹಾನಿಯಾಗಿದೆ.
ರಾಯಚೂರಿನಲ್ಲಿ ಸುರಿದ ಆಲಿಕಲ್ಲು ಮಳೆಗೆ ನೆಲಕಚ್ಚಿದ ಭತ್ತದ ಬೆಳೆ...ಪರಿಹಾರಕ್ಕೆ ಒತ್ತಾಯ
ರಾಯಚೂರಿನಲ್ಲಿ ಸುರಿದ ಭಾರೀ ಮಳೆಗೆ ರೈತರು ಬೆಳೆದ ಭತ್ತದ ಬೆಳೆ ಸಂಪೂರ್ಣ ನೆಲಕಚ್ಚಿದೆ. ಹೀಗಾಗಿ ಕೂಡಲೇ ಸರ್ಕಾರ ನೆರವು ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಸಿಂಧನೂರು ತಾಲೂಕಿನಲ್ಲಿ ಅತಿ ಹೆಚ್ಚು 4,785 ಹೆಕ್ಟೇರ್, ಮಸ್ಕಿಯಲ್ಲಿ 1,835 ಹೆಕ್ಟೇರ್, ಸಿರವಾರದಲ್ಲಿ 220 ಹಕ್ಟೇರ್, ಲಿಂಗಸುಗೂರಿನಲ್ಲಿ 134 ಹೆಕ್ಟೇರ್, ಮಾನ್ವಿ ತಾಲೂಕಿನಲ್ಲಿ 148 ಹೆಕ್ಟೇರ್, ದೇವದುರ್ಗದಲ್ಲಿ 13 ಹೆಕ್ಟೇರ್‌ನಷ್ಟು ಭತ್ತ ಹಾನಿಗೊಳಗಾಗಿದೆ.
ಕೃಷಿ ಆಧಾರಿತ ಬೆಳೆಗಳಲ್ಲಿ 5,157 ಹೆಕ್ಟೇರ್ ಪ್ರದೇಶದಲ್ಲಿನ 696 ರೈತರ ಬೆಳೆಗಳು ಶೇ.33 ರಿಂದ 50ರಷ್ಟು ಹಾನಿಗೊಳಗಾಗಿದ್ದು, ಪರಿಹಾರ ನೀಡಲು 6.96 ಕೋಟಿ ರೂ. ಅಗತ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಾನಿಗೀಡಾದ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.