ಕರ್ನಾಟಕ

karnataka

ETV Bharat / state

ವ್ಯಾಕ್ಸಿನೇಷನ್​ಗೆ​ ಹಿಂದೇಟು ಹಾಕಿದ ಕೊರೊನಾ ವಾರಿಯರ್ಸ್​.. ಶೇ.58ರ ಗುರಿ ತಲುಪಿದ ಸರ್ಕಾರ!

ಕೆಲವು ಮದ್ಯಪಾನ ಮಾಡುವವರಂತೂ ವ್ಯಾಕ್ಸಿನ್ ಹಾಕಿಸಿಕೊಂಡರೆ ಸುಮಾರು 45 ದಿನಗಳ ಕಾಲ ಅದರಿಂದ ದೂರ ಉಳಿಯಬೇಕೆಂಬ ಷರತ್ತಿಗೆ ಹೆದರಿ ವ್ಯಾಕ್ಸಿನ್​ ಹಾಕಿಸಿಕೊಳ್ಳುವಲ್ಲಿ ಮುಂದೆ ಬರಲಿಲ್ಲ..

By

Published : Feb 17, 2021, 3:45 PM IST

corona-warriors-opposed-the-vaccination-in-raichur
ಡಾ.ರಾಮಕೃಷ್ಣ, ಡಿಹೆಚ್ಓ

ರಾಯಚೂರು :ಕೊರೊನಾ ವೈರಸ್​ ವಿರುದ್ದ ಹೋರಾಡಿದವಾರಿಯರ್ಸ್​ ಯೋಗಕ್ಷೇಮದ ಸುಧಾರಣೆಗೆ ಮುಂದಾದ ಸರ್ಕಾರ ವಾರಿಯರ್ಸ್​ಗೆ ಅನುಗುಣವಾಗಿ ವ್ಯಾಕ್ಸಿನ್ ಸರಬರಾಜು ಮಾಡಿತು.

ಆದ್ರೆ, ವ್ಯಾಕ್ಸಿನ್ ಹಾಕಿಸುವಲ್ಲಿ ವಾರಿಯರ್ಸ್​ ಹಲವಾರು ಕಾರಣಗಳನ್ನು ಮುಂದಿಟ್ಟು ಇದರಿಂದ ದೂರ ಸರಿದಿದ್ದಾರೆ. ಇದು ಸರ್ಕಾರದ ಮೊದಲ ಹಂತದ ಗುರಿಗೆ ಹಿನ್ನಡೆಯಾಗಿದೆ.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ಮಾತನಾಡಿದರು

ಜಿಲ್ಲೆಯಲ್ಲಿ ಸುಮಾರು 21,282 ಕೊರೊನಾ ವಾರಿಯರ್ಸ್​ಗಳನ್ನು ಗುರುತಿಸಲಾಯಿತು. ಇದರಲ್ಲಿ ಆರೋಗ್ಯ ಇಲಾಖೆ, ಪೊಲೀಸ್, ಕಂದಾಯ ಇಲಾಖೆ, ಸ್ಥಳೀಯ ಸಂಸ್ಥೆಗಳ ನೌಕರರು ಒಳಗೊಂಡಿದ್ದಾರೆ.

ಈ ಎಲ್ಲ ಇಲಾಖೆಯ ವಾರಿಯರ್ಸ್‌ಗೆ ಮೊದಲ ಹಂತದಲ್ಲಿ ವ್ಯಾಕ್ಸಿನ್ ನೀಡಲು ಗುರಿ ಹೊಂದಲಾಗಿತ್ತು. ಆದರೆ, ಒಟ್ಟು ವಾರಿಯರ್ಸ್​ ಪೈಕಿ ಕೇವಲ 12,294 ಜನರು ಮಾತ್ರ ವ್ಯಾಕ್ಸಿನ್ ಹಾಕಿಸಿಕೊಂಡಿರುವುದರಿಂದ ಸರ್ಕಾರದ ಸಾಧನೆ ಕೇವಲ ಶೇ.58ರಷ್ಟು ಎನ್ನಲಾಗಿದೆ.

ಯಾಕೆ ಹಿಂದೇಟು? :ಕೊರೊನಾಗೆ ಲಸಿಕೆ ಬಂದ ಆರಂಭದಲ್ಲಿ ಸಹಜವಾಗಿಯೇ ಭಯ ಆವರಿಸಿತ್ತು. ವ್ಯಾಕ್ಸಿನ್ ಹಾಕಿಸಿಕೊಂಡರೆ ಏನಾದರೂ ಅಡ್ಡ ಪರಿಣಾಮ ಆಗಬಹುದು ಎನ್ನುವ ಭಯವೂ ಕೆಲವರನ್ನು ಕಾಡಿತ್ತು.

ಕೆಲವು ಮದ್ಯಪಾನ ಮಾಡುವವರಂತೂ ವ್ಯಾಕ್ಸಿನ್ ಹಾಕಿಸಿಕೊಂಡರೆ ಸುಮಾರು 45 ದಿನಗಳ ಕಾಲ ಅದರಿಂದ ದೂರ ಉಳಿಯಬೇಕೆಂಬ ಷರತ್ತಿಗೆ ಹೆದರಿ ವ್ಯಾಕ್ಸಿನ್​ ಹಾಕಿಸಿಕೊಳ್ಳುವಲ್ಲಿ ಮುಂದೆ ಬರಲಿಲ್ಲ.

ಓದಿ:ನಿಮ್ಮ ರಾಜಕೀಯಕ್ಕಾಗಿ ರಾಮನ ಹೆಸರು ಬಳಸಿಕೊಳ್ತಿದ್ದೀರಾ.. ಮಾಜಿ ಸಿಎಂ ಹೆಚ್‌ಡಿಕೆ ತಿರುಗೇಟು

ಸದ್ಯ ಮೊದಲ ಹಂತ ಮುಗಿದು, 2ನೇ ಹಂತದ ವ್ಯಾಕ್ಸಿನ್ ಆರಂಭಿಸಲಾಗಿದೆ. ಪ್ರಾರಂಭದಲ್ಲಿ ಗುರಿ ತಲುಪಲು ಹಿನ್ನಡೆಯಾಗಿದೆ. 2ನೇ ಹಂತದಲ್ಲಿಯಾದರೂ ವ್ಯಾಕ್ಸಿನ್ ಪಡೆದವರಿಗೆ 2ನೇ ಡೋಸ್ ಹಾಕಿಸುವಲ್ಲಿ ಸಫಲವಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details