ಕರ್ನಾಟಕ

karnataka

ETV Bharat / state

ರಾಯಚೂರಿನಲ್ಲಿಂದು 233 ಜನರಿಗೆ ಕೊರೊನಾ..ಮೂರು ಬಲಿ - Raichur Corona Case

ರಾಯಚೂರಿನಲ್ಲಿಂದು 233 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಮೂವರು ಸೋಂಕಿಗೆ ಬಲಿಯಾಗಿದ್ದಾರೆ.

Corona Positive for 233 people in Raichur district
ರಾಯಚೂರಿನಲ್ಲಿಂದು 233 ಜನರಿಗೆ ಕೊರೊನಾ..ಮೂರು ಬಲಿ

By

Published : Sep 2, 2020, 6:15 PM IST

ರಾಯಚೂರು:ಜಿಲ್ಲೆಯಲ್ಲಿಂದು 233 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 7,640ಕ್ಕೆ ಏರಿಕೆಯಾಗಿದೆ.

ರಾಯಚೂರು 78, ಮಾನವಿ 29, ಲಿಂಗಸೂಗೂರು 40, ಸಿಂಧನೂರು 37, ದೇವದುರ್ಗದಲ್ಲಿ 49 ಪ್ರಕರಣಗಳು ಪತ್ತೆಯಾಗಿವೆ. ಇಂದು ಮೂವರು ಸೋಂಕಿಗೆ ಬಲಿಯಾಗಿದ್ದು, ಮೃತರ ಸಂಖ್ಯೆ 94ಕ್ಕೆ‌ ಏರಿಕೆಯಾಗಿದೆ. ಈವರೆಗೆ ಪತ್ತೆಯಾಗಿರುವ ಸೋಂಕಿತರಲ್ಲಿ 5,892 ಮಂದಿ ಸಂಪೂರ್ಣ ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 1,654 ಸಕ್ರಿಯ ಪ್ರಕರಣಗಳಿವೆ.

ರೋಗ ಗುಣಲಕ್ಷಣದ ಆಧಾರದ ಮೇಲೆ ಸೋಂಕಿತರನ್ನ ಕ್ವಾರಂಟೈನ್ ಕೇಂದ್ರ, ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆಯಲ್ಲಿ ತಿಳಿಸಿದೆ.

ABOUT THE AUTHOR

...view details