ಕರ್ನಾಟಕ

karnataka

ETV Bharat / state

ಆರ್‌ಟಿಪಿಎಸ್ ನೌಕರನ ಮಗನಿಗೆ ಕೊರೊನಾ... ಸಹೋದ್ಯೋಗಿಗಳಲ್ಲಿ ಆತಂಕ

ರಾಯಚೂರು ಜಿಲ್ಲೆಯಲ್ಲಿ ಆರ್‌ಟಿಪಿಎಸ್ ನೌಕರನ ಪುತ್ರನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಆತ ಚಿಕಿತ್ಸೆ ಪಡೆದ ಆಸ್ಪತ್ರೆಯನ್ನು ಸೀಲ್ ‌ಡೌನ್ ಮಾಡಲಾಗಿದೆ.

By

Published : Jul 4, 2020, 4:40 PM IST

Corona Infection to RTPS employees' son
ಆರ್‌ಟಿಪಿಎಸ್ ನೌಕರರ ಮಗನಿಗೆ ಅಂಟಿದ ಸೋಂಕು... ನೌಕರರಲ್ಲಿ ಕೊರೊನಾ ಭೀತಿ

ರಾಯಚೂರು:ಆರ್‌ಟಿಪಿಎಸ್ ನೌಕರನ ಪುತ್ರನಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಆತ ಚಿಕಿತ್ಸೆ ಪಡೆದ ಆಸ್ಪತ್ರೆಯನ್ನು ಸೀಲ್ ‌ಡೌನ್ ಮಾಡಲಾಗಿದೆ.

ನೌಕರನ ಪುತ್ರನಿಗೆ ಕೊರೊನಾ ಲಕ್ಷಣ ಕಂಡು ಬಂದಿತ್ತು. ಹೀಗಾಗಿ ಆತನ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆಂದು ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಇದೀಗ ಪ್ರಯೋಗಾಲಯದ ವರದಿ ಬಂದಿದ್ದು, ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಸದ್ಯ ಸೋಂಕಿತನನ್ನ ಐಸೋಲೋಷನ್ ವಾರ್ಡ್‌ಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ.

ಸೋಂಕಿತ ಚಿಕಿತ್ಸೆ ಪಡೆದಿದ್ದ ಕೆಪಿಟಿಸಿಎಲ್ ಆಸ್ಪತ್ರೆಯನ್ನ ಸ್ಯಾನಿಟೈಸ್​​ ಮಾಡಿ ಸೀಲ್‌ ಡೌನ್ ಮಾಡಲಾಗಿದೆ. ಚಿಕಿತ್ಸೆ ನೀಡಿದ ವೈದ್ಯರು, ಸಿಬ್ಬಂದಿ ಹಾಗೂ ಸೋಂಕಿತನ ಕುಟುಂಬಸ್ಥರನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಪ್ರಾಥಮಿಕ ಮತ್ತು ದ್ವೀತಿಯ ಸಂಪರ್ಕವನ್ನ ಪತ್ತೆ ಹಚ್ಚಲಾಗುತ್ತಿದೆ. ಪ್ರಕರಣದಿಂದ ಆರ್‌ಟಿಪಿಎಸ್ ನೌಕರರಿಗೂ ಸೋಂಕಿನ ಭೀತಿ ಶುರುವಾಗಿದೆ.

ABOUT THE AUTHOR

...view details