ರಾಯಚೂರು :ಜಿಲ್ಲೆಯ ಲಿಂಗಸುಗೂರು ತಾಲೂಕು ಹಟ್ಟಿ ಚಿನ್ನದ ಗಣಿಯ ಹೊಸ ಬಸ್ ನಿಲ್ದಾಣದ ಬಳಿ ಶನಿವಾರ ಮಧ್ಯಾಹ್ನ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಗ್ಯಾರೇಜ್ ಹಾಕುವ ವಿಷಯಕ್ಕೆ ಸಂಬಂಧಿಸಿ ನಡೆದಿದ್ದ ಜಗಳಕ್ಕೆ ಸ್ನೇಹಿತ ಮೆಹಬೂಬ್ ಎಂಬುವರ ಕುಮ್ಮಕ್ಕಿನಿಂದ ಮುಸ್ತಫಾ ಹಾಗೂ ಮೌಲಿಪಾಷ ಎಂಬುವರು ಮುರ್ತುಜಾ ಅನ್ಸಾರಿ ಎಂಬುವರನ್ನು ಕೊಲೆ ಮಾಡಿದ್ದರು.