ಕರ್ನಾಟಕ

karnataka

ETV Bharat / state

ಮೈಸೂರಿನಲ್ಲಿ ಸ್ಕೂಟರ್​ಗಳ ನಡುವೆ ಅಪಘಾತ.. ಖಾಸಗಿ ಕಂಪನಿ ಆರ್ಕಿಟೆಕ್ಟ್​​ ಸಾವು - ಮೈಸೂರು ಅಪಘಾತದಲ್ಲಿ ಯುವತಿ ಸಾವು

ಮೈಸೂರಿನಲ್ಲಿ ಎರಡು ಸ್ಕೂಟರ್​ಗಳ ನಡುವೆ ಸಂಭವಿಸಿ‌‌ದ ಅಪಘಾತದಲ್ಲಿ ಯುವತಿ ಸಾವನ್ನಪ್ಪಿದ್ದಾಳೆ.

young-woman-killed-in-road-accident-in-mysore
ಮೈಸೂರಿನಲ್ಲಿ ಸ್ಕೂಟರ್​ ನಡುವೆ ಅಪಘಾತ

By

Published : May 6, 2022, 9:03 PM IST

ಮೈಸೂರು:ನಗರದ ರಿಂಗ್ ರಸ್ತೆಯಲ್ಲಿ ಶುಕ್ರವಾರ ಎರಡು ಸ್ಕೂಟರ್​ಗಳ ನಡುವೆ ಡಿಕ್ಕಿ ಸಂಭವಿಸಿ‌‌, ಯುವತಿ ಮೃತಪಟ್ಟ ಘಟನೆ ಸಂಭವಿಸಿದೆ. ಇಲ್ಲಿನ ಪೊಲೀಸ್ ಬಡಾವಣೆ ಮೂರನೇ ಹಂತದ ನಿವಾಸಿ ಲತಾ (24) ಮೃತಪಟ್ಟ ಯುವತಿಯಾಗಿದ್ದಾಳೆ.

ಖಾಸಗಿ ಕಂಪನಿಯೊಂದರಲ್ಲಿ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದ ಲತಾ ಆಫೀಸ್​ಗೆ ಸ್ಕೂಟಿಯಲ್ಲಿ ಹೋಗುತ್ತಿದ್ದ ವೇಳೆ ರಿಂಗ್ ರಸ್ತೆ ದಾಟುತ್ತಿದ್ದಾಗ ಬಂಡಿಪಾಳ್ಯ ಕಡೆಯಿಂದ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ ಹೊಡೆದಿದೆ. ಇದರಿಂದ ಕೆಳಕ್ಕೆ ಬಿದ್ದ ಯುವತಿಯ ತಲೆಯ ಭಾಗಕ್ಕೆ ತೀವ್ರ ಪೆಟ್ಟಾಗಿತ್ತು.

ಗಾಯಾಳುವನ್ನು ಸಾರ್ವಜನಿಕರು ತಕ್ಷಣ ಸಮೀಪದ ನಿರ್ಮಲಾ ಆಸ್ಪತ್ರೆಗೆ ಕರೆದುಕೊಂಡು ಹೋದರಾದರೂ ಅಷ್ಟೊತ್ತಿಗಾಗಲೇ ಪ್ರಾಣ ಬಿಟ್ಟಿದ್ದಳು. ಘಟನೆ ಸಂಬಂಧ ಸಿದ್ದಾರ್ಥನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಚೋಟಾ ಪಾಕಿಸ್ತಾನ್​ ಆಡಿಯೋ ವೈರಲ್ ಪ್ರಕರಣ​.. ಇಬ್ಬರು ಆರೋಪಿಗಳ ಬಂಧನ

ABOUT THE AUTHOR

...view details