ಕರ್ನಾಟಕ

karnataka

ETV Bharat / state

ಅಪಘಾತದಲ್ಲಿ ಮೃತಪಟ್ಟರೂ 6 ಜೀವಗಳಿಗೆ ಯುವಕನಿಂದ ಹೊಸ ಬದುಕು.. ಮೈಸೂರಿನಿಂದ ಚೆನ್ನೈನತ್ತ ಮಿಡಿಯಿತು ಈ'ಹೃದಯ'.. - ದರ್ಶನ್ ಎಂಬ ಯುವಕನ ಅಪಘಾತದಲ್ಲಿ ಬ್ರೈನ್‌ ಡೆಡ್

ಅಪಘಾತದಲ್ಲಿ ಬ್ರೈನ್‌ ಡೆಡ್ ಆಗಿರುವ ದರ್ಶನ್ ಎಂಬ ಯುವಕನ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ. ಈ ಮೂಲಕ ಆತ ಆರು ಜನರ ಬಾಳಿಗೆ ಬೆಳಕಾಗಿದ್ದಾರೆ. ಅಲ್ಲದೇ ಮೈಸೂರಿನಿಂದ ಚೆನ್ನೈಗೆ ಜೀವಂತ ಹೃದಯ ರವಾನೆ ಮಾಡಲಾಗಿದೆ..

Young boy Brain Dead in Accident
ಅಪಘಾತದಲ್ಲಿ ಯುವಕನ ಬ್ರೈನ್‌ ಡೆಡ್

By

Published : Jan 21, 2022, 4:38 PM IST

ಮೈಸೂರು :ಮೈಸೂರಿನ ಬಿಜಿಎಸ್ ಅಪೋಲೊ ಆಸ್ಪತ್ರೆಯಿಂದ ಚೆನ್ನೈಗೆ ಜೀವಂತ ಹೃದಯ ರವಾನೆ ಮಾಡಲಾಗಿದೆ. ಅಪಘಾತದಲ್ಲಿ ಬ್ರೈನ್‌ ಡೆಡ್ ಆಗಿರುವ ದರ್ಶನ್ (24) ಎಂಬ ಯುವಕನ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ.

ಈ ಹಿನ್ನೆಲೆ ಅಪೋಲೊ ಆಸ್ಪತ್ರೆಯಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ವಿಮಾನದ ಮೂಲಕ ಚೆನ್ನೈನ ಎಂಜಿಎಂ ಹೆಲ್ತ್ ಕೇರ್​​ಗೆ ಹೃದಯ ರವಾನೆ ಮಾಡಲಾಗಿದೆ.

ಅಪಘಾತದಲ್ಲಿ ಯುವಕನ ಬ್ರೈನ್‌ ಡೆಡ್

ಜ.18ರಂದು ಅಪಘಾತದಲ್ಲಿ ಗಾಯಗೊಂಡಿದ್ದ ದರ್ಶನ್​​ನನ್ನು ಮೈಸೂರಿನ ಅಪೊಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ದರ್ಶನ್ ಮೃತಪಟ್ಟಿದ್ದಾರೆ.

ಜಿರೋ ಟ್ರಾಫಿಕ್​ ಮೂಲಕ ಆ್ಯಂಬುಲೆನ್ಸ್​​ನಲ್ಲಿ 10 ನಿಮಿಷದಲ್ಲಿ ಗ್ರೀನ್ ಕಾರಿಡಾರ್​​ನಲ್ಲಿ ಮೈಸೂರು ವಿಮಾನ ನಿಲ್ದಾಣವನ್ನು 2.30ಕ್ಕೆ ತಲುಪಲಾಗಿದೆ.

ಅಲ್ಲಿಂದ ಚೆನ್ನೈನ ಆಸ್ಪತ್ರೆಗೆ ಹೃದಯ ರವಾನೆಯಾಗಿದೆ. ಮೂಲತಃ ಗುಂಡ್ಲುಪೇಟೆಯ ದರ್ಶನ್, ಮೈಸೂರಿನ ಬೆಳವಾಡಿಯಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದರು.

ಇದನ್ನೂ ಓದಿ: 60 ವರ್ಷಗಳಿಂದ ಸ್ನಾನ ಮಾಡದ ಭೂಮಿ ಮೇಲಿನ ಏಕೈಕ ಮನುಷ್ಯ ಈತ!

ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ದರ್ಶನ್​​ಗೆ ಎರಡು ತಿಂಗಳ ಮಗು ಇತ್ತು. ಇದೀಗ ಅವರು ಆರು ಜನರ ಬಾಳಿಗೆ ಬೆಳಕಾಗಿದ್ದಾರೆ. ಜ.18ರಂದು ರಸ್ತೆ ಅಪಘಾತವಾದಾಗ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಪಘಾತದ ರಭಸಕ್ಕೆ ಯುವಕನ ಬ್ರೈನ್‌ ಡೆಡ್ ಆಗಿತ್ತು. ಈ ಹಿನ್ನೆಲೆ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದರು.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details