ಮೈಸೂರಿನಲ್ಲಿ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮ ಮೈಸೂರು : ಮೈಸೂರು ಸಾಂಸ್ಕೃತಿಕ ನಗರ ಮಾತ್ರವಲ್ಲದೇ ಯೋಗದ ನಗರ ಎಂದು ಕೂಡ ಪ್ರಸಿದ್ಧಿ ಪಡೆದಿದೆ. ರಾಜರ ಕಾಲದಿಂದಲೂ ಯೋಗವನ್ನು ಪ್ರೋತ್ಸಾಹಿಸಲಾಗುತ್ತಿದೆ. ಇದು ದೇಶಕ್ಕೆ ಮಾದರಿ ಆಡಳಿತ ಎಂದು ಸಚಿವ ಡಾ. ಹೆಚ್ ಸಿ ಮಹದೇವಪ್ಪ ಹೇಳಿದರು.
ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಅರಮನೆ ಮುಂಭಾಗದ ಆವರಣದಲ್ಲಿ ಬುಧವಾರ ಯೋಗ ದಸರಾ ಉಪಸಮಿತಿ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ದಸರಾ ಉತ್ಸವದಲ್ಲಿ ಯೋಗಭ್ಯಾಸವನ್ನು ಹಮ್ಮಿಕೊಳ್ಳಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿಕೋನವನ್ನು ಆಧರಿಸಿ ಈ ಬಾರಿಯ ದಸರಾವನ್ನು ಅತ್ಯುತ್ತಮವಾಗಿ ಆಯೋಜನೆ ಮಾಡಲಾಗಿದೆ ಎಂದರು.
ಪುರಾತನ ಯೋಗ ಮತ್ತು ನೇಚರೋಪತಿಯು ಆರೋಗ್ಯವನ್ನು ಸಂರಕ್ಷಣೆ ಮಾಡುವಂತಹ ಅಸ್ತ್ರಗಳು. ಹೆಚ್ಚು ಹಣ ಖರ್ಚು ಮಾಡದೆ ರೋಗವನ್ನು ನಿಯಂತ್ರಣ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹಣ, ಆಸ್ತಿ, ಸಂಪತ್ತು ಕಳೆದುಕೊಂಡರೆ ಮರಳಿ ಪಡೆದುಕೊಳ್ಳಬಹುದು. ಆದರೆ, ಆರೋಗ್ಯ ಕೆಟ್ಟರೆ ಅದು ತುಂಬಲಾರದ ನಷ್ಟ. ಪ್ರತಿನಿತ್ಯ ನಿಯಮಿತವಾದ ವ್ಯಾಯಾಮ, ನಡಿಗೆ, ಕ್ರೀಡಾಭ್ಯಾಸದ ಜೊತೆಗೆ ಮನಸ್ಸನ್ನು ಉಲ್ಲಾಸದತ್ತ ಕೊಂಡೊಯ್ಯುವ ಯೋಗಭ್ಯಾಸವೂ ಕೂಡ ರೋಗಕ್ಕೆ ಉತ್ತಮವಾದ ಚಿಕಿತ್ಸಾ ವಿಧಾನವಾಗಿದೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆ ಸಚಿವನಾಗಿದ್ದ ಕಾಲದಿಂದಲೂ ಯೋಗಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದೇನೆ. 2017 ರಲ್ಲಿ 50 ಸಾವಿರಕ್ಕೂ ಹೆಚ್ಚು ಯೋಗಪಟುಗಳೊಂದಿಗೆ ಅಂತಾರಾಷ್ಟ್ರೀಯ ಯೋಗದಿನವನ್ನು ರೇಸ್ ಕೋರ್ಸ್‌ನಲ್ಲಿ ಆಚರಿಸಿ ಗಿನ್ನಿಸ್ ದಾಖಲೆ ಮಾಡಲಾಗಿದೆ ಎಂದು ಹಳೆಯ ದಿನಗಳನ್ನು ಮೆಲಕು ಹಾಕಿದರು.
ಈ ವೇಳೆ ಗುರು ಶ್ರೀಶರತ್ ಜೋಯಿಸ್ ಮತ್ತು ಅವರ ವಿದೇಶಿ ಶಿಷ್ಯ ವೃಂದದವರು ಅಷ್ಟಾಂಗ ಯೋಗಾಭ್ಯಾಸ ಮಾಡಿದರು. ಕಾರ್ಯಕ್ರಮದಲ್ಲಿ ಮೇಯರ್ ಶಿವಕುಮಾರ್, ಉಪ ಮೇಯರ್ ಡಾ. ಜಿ ರೂಪ, ಯೋಗ ದಸರಾ ಉಪ ಸಮಿತಿಯ ಅಧ್ಯಕ್ಷ ದೇವರಾಜು, ಉಪಾಧ್ಯಕ್ಷರಾದ ಹೇಮಂತ್, ಮಹೇಶ್, ಉಪ ವಿಶೇಷಾಧಿಕಾರಿ ಕೆ ರಮ್ಯ, ಕಾರ್ಯಾಧ್ಯಕ್ಷರಾದ ಡಿ ಎಂ ರಾಣಿ, ಕಾರ್ಯದರ್ಶಿ ಡಾ. ಪುಷ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಮಹಾರಾಣಿ ಕಾಲೇಜಿಗೆ ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ.ಸುಧಾಕರ್ ವಾಗ್ದಾಳಿ : ಇಂದು ಬೆಳಗ್ಗೆ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿಗೆ ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಎಂ ಸಿ.ಸುಧಾಕರ್ ಅವರು ಅಲ್ಲಿನ ಪರಿಸ್ಥಿತಿಯನ್ನು ಖುದ್ದು ವೀಕ್ಷಣೆ ಮಾಡಿದರು. ಅನಂತರ ಮಾಧ್ಯಮಗಳ ಜೊತೆ ಮಾತನಾಡಿ, ರಾಜ್ಯದಲ್ಲಿ ಈಗ ವೈಎಸ್ಟಿ, ಎಸ್ ಎಸ್ ಟಿ ತೆರಿಗೆ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದಾರೆ. ಆದರೆ, ಹೆಚ್ಡಿಕೆ ತರ ನಾವು ಕೂಡ ಮಾತನಾಡಬಹುದು. ವೈಯಕ್ತಿಕವಾಗಿ ಕುಮಾರಸ್ವಾಮಿ ಹಾಗೂ ದೇವೇಗೌಡರ ಬಗ್ಗೆ ಹೆಚ್ಚಿನ ಗೌರವವಿದೆ ಎಂದರು.
ನಮಗಿಂತ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ರಾಜಕೀಯದ ಬಗ್ಗೆ ಜನರಿಗೆ ಹೆಚ್ಚಾಗಿ ಗೊತ್ತಾಗಿದೆ. ಅವರು ಅವಕಾಶವಾದಿ ರಾಜಕಾರಣಿಗಳು. ಯಾವಾಗ ಯಾರನ್ನು ಬಿಟ್ಟು ಹೋಗುತ್ತಾರೆ, ಯಾರನ್ನು ಹೊಗಳುತ್ತಾರೆ ಗೊತ್ತಿಲ್ಲ. ಈಗ ರಾಜ್ಯಾಧ್ಯಕ್ಷರನ್ನು ಬಿಟ್ಟು ಅವರ ಕುಟುಂಬದವರನ್ನು ನೋಡಿಕೊಳ್ಳುತ್ತಿದ್ದಾರೆ. ಇಂತವರಿಂದ ನಾವು ಪಾಠ ಹೇಳಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ಬಿಜೆಪಿಯವರು ಹತಾಶರಾಗಿದ್ದಾರೆ : ರಾಜ್ಯದಲ್ಲಿ ಬಿಜೆಪಿಯವರು ಹತಾಶರಾಗಿದ್ದು, ಅವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಮೋದಿಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದರು. ಆದರೆ ಈಗ ಬದಲಾವಣೆ ಆಗುತ್ತಿದೆ. ಮೋದಿಯವರ ಮುಖ ನೋಡಿಕೊಂಡು ಇವರು ಮಾಡಿದ ಅನಾಚಾರ, ಭ್ರಷ್ಟಾಚಾರ, ಜನ ವಿರೋಧಿ ಆಡಳಿತವನ್ನು ಮರೆತು ಓಟು ನೀಡುತ್ತಾರೆ ಎಂದುಕೊಂಡಿದ್ದರು. ಅದು ಆಗಲಿಲ್ಲ. ಈಗ ಲೋಕಸಭಾ ಚುನಾವಣೆಯಲ್ಲಿ ಅವರ ಪರವಾದ ಅಲೆಯೂ ಇಲ್ಲ. ಆದ್ದರಿಂದ ಹತಾಶರಾಗಿರುವ ಬಿಜೆಪಿಯವರು ಏನೇನೋ ಹೇಳಿಕೆ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ತಾನು ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಿದೆ. ಇದರಿಂದ ಜನರಿಗೆ ನಮ್ಮ ಮೇಲೆ ನಂಬಿಕೆ ಬಂದಿದೆ. ಇದನ್ನು ಕೆಡಿಸಲು ಬಿಜೆಪಿ ನಾನಾ ಪ್ರಯತ್ನ ಮಾಡುತ್ತಿದೆ. ಬಿಜೆಪಿ ಗೊಂದಲ ಸೃಷ್ಟಿ ಮಾಡುವ ಪ್ರಯತ್ನ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮಹಾರಾಣಿ ಕಾಲೇಜಿಗೆ ಸಚಿವರ ಭೇಟಿ, ಪರಿಶೀಲನೆ : ಮೈಸೂರಿನ ಮಹಾರಾಣಿ ಮಹಿಳಾ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಭೇಟಿ ನೀಡಿದ ಸಚಿವರು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಬಗ್ಗೆ ಇಂಜಿನಿಯರ್ ಮತ್ತು ಆರ್ಕಿಟೆಕ್ಚರ್ಗಳಿಂದ ಮಾಹಿತಿ ಪಡೆದರು. ಇಲ್ಲಿ ಕಟ್ಟಡ ಮರು ನಿರ್ಮಾಣಕ್ಕೆ ಹೆರಿಟೇಜ್ ಕಮಿಟಿಯ ನಿರ್ಬಂಧವಿದ್ದು, ಈ ಹಿನ್ನೆಲೆಯಲ್ಲಿ ಯಾವ ರೀತಿಯ ಯೋಜನೆ ತಯಾರಿಸಬೇಕು ಎಂಬ ಚರ್ಚೆ ಮಾಡಲಾಗಿದೆ. ವಿಜ್ಞಾನ ಕಾಲೇಜಿನಲ್ಲಿ 3700 ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದು, ಕಲಾ ಕಾಲೇಜಿನಲ್ಲಿ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ನಿರ್ಮಾಣಕ್ಕೆ ಹೆರಿಟೇಜ್ ಮಾದರಿಯಲ್ಲಿ ಮರು ನಿರ್ಮಾಣಕ್ಕೆ ಚಿಂತನೆ ಮಾಡಲಾಗಿದೆ. ಇದಕ್ಕೆ ಹೆರಿಟೇಜ್ ಕಮಿಟಿ ಆಕ್ಷೇಪ ವ್ಯಕ್ತಪಡಿಸಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ :ದಸರಾ ಮ್ಯಾರಥಾನ್ : 4 ಕಿ.ಮೀ ಓಡಿದ ಚಾಮರಾಜನಗರ ಡಿಸಿ ಶಿಲ್ಪಾನಾಗ್