ಕರ್ನಾಟಕ

karnataka

ETV Bharat / state

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಪ್ರಾಣಿಗಳ ಬೇಟೆಗೆ ಹೊಂಚು: ಆರೋಪಿಗಳು ಅರೆಸ್ಟ್​​​

ಮೈಸೂರಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯ ಮೃಗಗಳ ಬೇಟೆಗೆ ಹೊಂಚು ಹಾಕಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.

By

Published : Jul 27, 2019, 11:06 PM IST

ಬಂಧಿತ ಆರೋಪಿಗಳು

ಮೈಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯ ಮೃಗಗಳ ಬೇಟೆಗೆ ಹೊಂಚು ಹಾಕಿದ್ದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ವನ್ಯ ಮೃಗಗಳ ಬೇಟೆಗೆ ಹೊಂಚು: ಆರೋಪಿಗಳು ಅರೆಸ್ಟ್

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆ ಚೌಕೂರು ವಲಯದ ಹೆಬ್ಬಳ್ಳ ಪ್ರದೇಶದಲ್ಲಿ ವನ್ಯ ಮೃಗಗಳ ಬೇಟೆಗೆ ಮಾರುತಿ ವ್ಯಾನ್​ನಲ್ಲಿ ಬಂದಿದ್ದ 5 ಜನ ಬೇಟೆಗಾರರನ್ನು ಬೆನ್ನಟ್ಟಿದ ಅರಣ್ಯ ಸಿಬ್ಬಂದಿ ಮೂರು ಜನ ಬೇಟೆಗಾರರನ್ನು ಬಂಧಿಸಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಬಂಧಿತರನ್ನು ಪೊನ್ನಂಪೇಟೆ ತಾಲೂಕಿನ ನಲ್ಲೂರು ಗ್ರಾಮದ ನಾಣಯ್ಯ, ನರೇಂದ್ರ ಮತ್ತು ಮಂಜು ಎಂದು ಗುರುತಿಸಲಾಗಿದ್ದು, ಇವರಿಂದ 6 ಗುಂಡು, ಮೂರು ಕತ್ತಿ, ಎರಡು ಬ್ಯಾಟರಿ, ನಾಡ ಬಂದೂಕು ಜೊತೆಗೆ ಒಂದು ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ತಪ್ಪಿಸಿಕೊಂಡಿರುವ ಇಬ್ಬರಿಗೆ ಬಲೆ ಬೀಸಲಾಗಿದ್ದು, ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಂಧನಕ್ಕೆ ಒಪ್ಪಿಸಲಾಗಿದೆ.

ABOUT THE AUTHOR

...view details