ಮೈಸೂರು:ಸಮ್ಮಿಶ್ರ ಸರ್ಕಾರ ಈಗ ಸುಭದ್ರವಾಗಿದೆ. ಆದ್ರೆ ಐದು ವರ್ಷ ಹೀಗೇ ಇರುತ್ತೆ ಅಂತಾ ಹೇಳಕ್ಕಾಗಲ್ಲವೆಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಸರ್ಕಾರ ಈಗ ಸುಭದ್ರ, ಆದ್ರೆ ಐದು ವರ್ಷ ಹೀಗೇ ಇರುತ್ತೆ ಅಂತಾ ಹೇಳಕ್ಕಾಗಲ್ಲ: ಸಚಿವ ಜಿಟಿಡಿ - kannadanews
ಮೈತ್ರಿ ಸರ್ಕಾರ ಈಗ ಸುಭದ್ರವಾಗಿದೆ. ಯಾವುದೇ ಆತಂಕವಿಲ್ಲ. ಆದರೆ ಐದು ವರ್ಷ ಹೀಗೇ ಇರುತ್ತೆ ಎಂದು ಹೇಳೋಕಾಗಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಸರ್ಕಾರ ಐದು ವರ್ಷ ಉಳಿಯುತ್ತೆ ಅಂತ ಹೇಳಕ್ಕಾಗಲ್ಲ
ಮೈಸೂರಿನಲ್ಲಿ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆಪರೇಷನ್, ರಿವರ್ಸ್ ಆಪರೇಷನ್ ಬಗ್ಗೆ ಎಲ್ಲರಿಗೂ ಭಯ, ಆತಂಕವಿದೆ. ಆದರೆ ಸದ್ಯ ನಮಗೆ ಭಯವಿಲ್ಲ. ಮುಂಬೈಗೆ ಮತ್ತೆ ನಾನು ಹೋಗುವುದಿಲ್ಲ. ಎಲ್ಲವೂ ಇಲ್ಲೇ ಆಗುತ್ತದೆ ಎಂದರು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ವಿಶ್ವಾಸ ಮಂಡನೆ ಮಾಡ್ತೀನಿ ಎಂದಿದ್ದಾರೆ. ಅತೃಪ್ತ ಶಾಸಕರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದರು.